ನನ್ನ ತೇಜೋವಧೆಗೆ ಯತ್ನ: ಎಚ್. ಹಾಲಪ್ಪ ಆರೋಪ

Update: 2017-08-22 14:24 GMT

ಸೊರಬ, ಆ.22: ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪಗಳು ಸಾಮಾನ್ಯ, ಆದರೆ, ರಾಜಕೀಯ ದುರುದ್ದೇಶದಿಂದ ವ್ಯಕ್ತಿಯ ವೈಯಕ್ತಿಕ ವಿಷಯಗಳನ್ನು ಮುಂದಿಟ್ಟುಕೊಂಡು ಸುಳ್ಳು ಆರೋಪಗಳನ್ನು ಹೊರಿಸಿ ತೇಜೋವಧೆಗೆ ಮುಂದಾಗುವುದು ಅಕ್ಷಮ್ಯ ಎಂದು ಮಾಜಿ ಸಚಿವ ಎಚ್.ಹಾಲಪ್ಪ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಪಟ್ಟಣದ ಶ್ರೀರಂಗನಾಥ ದೇವಸ್ಥಾನದ ಮುಂಭಾಗದಲ್ಲಿ ತಾಲೂಕು ಬಿಜೆಪಿಯಿಂದ ಸತ್ಯಮೇವ ಜಯತೆ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಏಳು ವರ್ಷಗಳ ಹಿಂದೆ ನನ್ನನ್ನು ರಾಜಕೀಯದಿಂದ ಮುಗಿಸುವ ಹುನ್ನಾರ ನಡೆಸಿ ಓರ್ವ ಮಹಿಳೆಯಿಂದ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿತ್ತು. ಆರೋಪ ಗಂಭೀರವಾಗಿದ್ದರಿಂದ ಆ ಸಂದರ್ಭದಲ್ಲಿ ಮನನೊಂದು ಆತ್ಮಹತ್ಯೆಗೆ ಚಿಂತಿಸಿದ್ದೆ. ಆದರೆ, ನಮ್ಮ ಪಕ್ಷದ ಅನೇಕ ಹಿರಿಯರು ಹಾಗೂ ನನ್ನ ಹಿತೈಷಿಗಳು ನನಗೆ ಆತ್ಮಸ್ಥೈರ್ಯ ತುಂಬಿದರು. ಆಗ ನಾನು ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟು ಪ್ರಕರಣವನ್ನು ಎದುರುಸಿದೆ. ಇಂದು ನನಗೆ ನ್ಯಾಯ ದೊರೆತಿದ್ದು, ಆರೋಪದಿಂದ ಮುಕ್ತನಾಗಿದ್ದೇನೆ ಎಂದರು.

ಶಿಕಾರಿಪುರ ಶಾಸಕ ಬಿ.ವೈ.ರಾಘವೇದ್ರ ಮಾತನಾಡಿ, ನಂಜುಂಡಪ್ಪವರದಿಯನ್ವಯ ಸೊರಬ ತಾಲೂಕು ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಎಚ್.ಹಾಲಪ್ಪಅವರು ಯಡಿಯೂರಪ್ಪಅವರ ಸಹಕಾರದಿಂದ ತಾಲೂಕನ್ನು ಅಭಿವೃದ್ಧಿ ಪಡಿಸಿದ್ದರು. ಇದನ್ನು ಸಹಿಸದ ಕೆಲ ಕುತಂತ್ರಿ ರಾಜಕಾರಣಿಗಳು ಹಾಲಪ್ಪಅವರನ್ನು ರಾಜಕೀಯದಿಂದಲೆ ಮುಗಿಸುವ ಹುನ್ನಾರದಿಂದ ಸುಳ್ಳು ಆರೋಪ ಹೊರಿಸಿದ್ದರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News