ದಾವಣಗೆರೆ: ಪಾಲಿಕೆ ಅಧಿಕಾರಿಗಳ ಮೇಲೆ ಹಲ್ಲೆ

Update: 2017-08-22 17:20 GMT

 ದಾವಣಗೆರೆ, ಆ.22: ಹಂದಿಗಳ ಹಾವಳಿ ತಪ್ಪಿಸುವಂತೆ ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಡಾಡಿ ಹಂದಿಗಳ ಸೆರೆ ಹಿಡಿಯಲು ಮುಂದಾದ ಪಾಲಿಕೆಯ ಅಧಿಕಾರಿಗಳು ಸೇರಿದಂತೆ ನಾಲ್ವರು ತಮಿಳುನಾಡು ಮೂಲದ ಹಂದಿ ಹಿಡಿಯುವವರ ಮೇಲೆ ಕೆಲ ಹಂದಿ ಮಾಲೀಕರು ಹಲ್ಲೆ ನಡೆಸಿ, ವಾಹನ ಜಖಂಗೊಳಿಸಿದ ಘಟನೆ ನಗರ ಎಂಸಿಸಿ ಬಿ ಬ್ಲಾಕ್ ಬಳಿ ಮಂಗಳವಾರ ನಡೆದಿದೆ.

ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ಸುಂಕದ ಅವರ ತಂಡ ಪೋಲಿಸರ ರಕ್ಷಣೆಯೊಂದಿಗೆ ತಮಿಳುನಾಡು, ಮಧುರೈನಿಂದ ಬಂದ ಹಂದಿ ಹಿಡಿಯುವರೊಂದಿಗೆ ನಗರರದ ವಿವಧೆಡೆ ಹಂದಿ ಹಿಡಿಯಲು ಮುಂದಾದರು. ಹಳೆಯ ಕೆಳಸೇತುವೆಯ ಶಿವಾಜಿ ವೃತ್ತದ ಹತ್ತಿರ ಹಂದಿಗಳನ್ನು ತುಂಬಿದ್ದ ವಾಹನವನ್ನು ಕೆಲ ಹಂದಿ ಮಾಲಿಕರು ತಡೆಗಟ್ಟಿ ಹಲ್ಲೆ ನಡೆಸಿದ್ದು, ಇದರಿಂದ ನಾಲ್ವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪಾಲಿಕೆ ಅಧಿಕಾರಿ ಚಂದ್ರಶೇಖರ್ ಸುಂಕದ, ಜಿಲ್ಲಾಡಳಿತದ ಆದೇಶದಂತೆ ನಿನ್ನೆಯಂತೆ ಇಂದೂ ಕೂಡಾ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಿ, ಸುಮಾರು 50ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ವಾಹನಗಳ ಮೂಲಕ ಹೊರ ಸಾಗಿಸುವಾಗ ಹಂದಿಗಳ ಮಾಲೀಕರು, ಕೆಲಸಕ್ಕೆ ಅಡ್ಡಿ ಪಡಿಸಿ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ, ವಾಹನದಲ್ಲಿದ್ದ ಹಂದಿಗಳನ್ನು ಹೊತ್ತುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಸೋಮವಾರದಿಂದ ಬಿಡಾಡಿ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದು, ಮಂಗಳವಾರವೂ ಈ ಕಾರ್ಯಚರಣೆಗೆ ಮುಂದಾದ ಸಂದರ್ಭದಲ್ಲಿ ಪಾಲಿಕೆ ಸದಸ್ಯ  ಪರಸಪ್ಪ ಮತ್ತು ನಾಲ್ವರು ಬೆಂಬಲಿಗರು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸಿದ್ದಾರೆ ಈ ಬಗ್ಗೆ ಬಸವನಗರ ಪೊಲೀಸರಿಗೆ ದೂರು ನೀಡಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News