ಮಂಡ್ಯ; ರೌಡಿ ಶೀಟರ್ ಪಟ್ಟಿಗೆ ಪತ್ರಕರ್ತರ ಹೆಸರು ಸೇರ್ಪಡೆ: ಖಂಡನೆ

Update: 2017-08-22 18:11 GMT

ಮಂಡ್ಯ, ಆ.22: ವಿನಾಕಾರಣ ಮೂವರು ಪತ್ರಕರ್ತರನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಸುವುದು ಖಚಿಡಿಸಿ ಹಾಗು ಪಟ್ಟಿಯಿಚಿದ ಕೈಬಿಡುವಚಿತೆ ಆಗ್ರಹಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಕೆರಗೋಡು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರಿಗೆ ಮಂಗಳವಾರ  ಮನವಿ ಸಲ್ಲಿಸಿದರು.

ಈ ವೇಳೆ  ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಕೆರಗೋಡು ಮಾತನಾಡಿ, ನಾಗಮಂಗಲದ ಪತ್ರ ಕರ್ತರಾದ ಗದ್ದೇಭೂವನಹಳ್ಳಿ ದೇವರಾಜು, ಚಂದ್ರಮೌಳಿ ಹಾಗು ಮತ್ತೊಬ್ಬರನ್ನು ನಾಗಮಂಗಲ ಪಟ್ಟಣ ಠಾಣೆಯ ರೌಡಿ ಶೀಟರ್ ಪಟ್ಟಿಗೆ ಸೇರ್ಪಡೆಗೊಳಿಸಿರುವುದನ್ನು ಖಂಡಿಸಿದರು.

ಸದರಿ ಪತ್ರಕರ್ತರು ತಾಲೂಕಿನಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ಸೇರಿದಂತೆ, ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯತೆ ಬಗ್ಗೆ ವರದಿ ಮಾಡಿ ಗಮನ ಸೆಳೆದಿದ್ದು, ಇದನ್ನು ಸಹಿಸದೆ ನಾಗಮಂಗಲ ಪೊಲೀಸರು ರೌಡಿ ಶೀಟರ್ ಪಟ್ಟಿಗೆ ಸೇರಿಸಿದ್ದಾರೆ ಎಂದು ಹೇಳಿದರು.
ಕೂಡಲೇ ರೌಡಿ ಶೀಟರ್ ಪಟ್ಟಿಯಿಚಿದ ಹೆಸರು ಕೈಬಿಡಬೇಕು. ಇದಕ್ಕೆ ಕಾರಣರಾದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಹೆಗಡೆ,  ಕೆ.ಶಂಭು, ಎನ್.ಎಸ್ ಮೂರ್ತಿ, ಕುಂಟನಹಳ್ಳಿ ಮಲ್ಲೇಶ, ಸುದೇಶ್‍ಪಾಲ್, ಮೋಹನ್ ರಾಜ್, ಆನಂದ್, ಬಿ.ಟಿ.ಮೋಹನ್ ಕುಮಾರ್, ಬಿ.ಕೆ.ಸತೀಶ್, ಶ್ರೀನಿವಾಸ್, ಯತೀಶ್ ಕುಮಾರ್, ದಶರಥ್, ಗದ್ದೇಭೂವನಹಳ್ಳಿ ದೇವರಾಜು, ಚಂದ್ರಮೌಳಿ, ಚನ್ನಕೇಶವ,  ಎನ್.ಕೆ. ವಿನೋದ್‍ಕುಮಾರ್, ರಾಜೇಂದ್ರಕುಮಾರ್, ಕೃಷ್ಣಮೂರ್ತಿ, ರಮೇಶ್, ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News