ಜಿಲ್ಲಾ ಲೆಕ್ಕ ಪರಿಶೋದಕ ಸಂಘದಿಂದ ಜಿ.ಎಸ್.ಟಿ ಬಗ್ಗೆ ಆರಿವು ಜಾಥ
ಚಾಮರಾಜನಗರ, ಆ. 23: ಚಾಮರಾಜನಗರ ಜಿಲ್ಲಾ ಲೆಕ್ಕಪರಿಶೋದಕ ಸಂಘದಿಂದ ಜಿ.ಎಸ್.ಟಿ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು. ಚಾಮರಾಜನಗರದ ಪ್ರಮುಖ ಬೀದಿಗಳಲ್ಲಿ ಇರುವ ಅಂಗಡಿಗಳಿಗೆ ಮೆರವಣಿಗೆ ಮೂಲಕ ತೆರಳಿ ಪ್ರತಿ ಅಂಗಡಿಗಳಿಗೆ ಜಿ.ಎಸ್.ಟಿ. ಬಗ್ಗೆ ಆರಿವು ಮೂಡಿಸಿದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಲೆಕ್ಕಪರಿಶೋದಕ ಸಂಘದ ಅಧ್ಯಕ್ಷರಾದ ಸಿ.ಎಂ.ವೆಂಕಟೇಶ್ ಮಾತನಾಡಿ ಈಗಾಗಲೇ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ ಪದ್ದತಿಯು ದೇಶದ ಅತ್ಯುತ್ತಮ ತೆರಿಗೆ ಪದ್ದತಿಯಾಗಿದ್ದು, ದೇಶದ ಪ್ರಗತಿಗಾಗಿ ಒಗ್ಗೂಡಿ ಪ್ರಗತಿಯ ಪಥದಲ್ಲಿ ದೇಶವನ್ನು ಮುನ್ನೆಡೆಸಿಕೊಂಡು ಹೋಗಲು ನಾವು ಬದ್ದರಾಗಿರಬೇಕಾಗಿರುತ್ತದೆ.
ಮುಂದಿನ ನಮ್ಮದೇಶದ ಬೆಳವಣಿಗೆಯನ್ನು ನಾವು ನಿರೀಕ್ಷಿಸ ಬೇಕಾದರೆ ನಿಮ್ಮ ನಮ್ಮೇಲರ ಸಹಕಾರ ಅತ್ಯಗತ್ಯವಾಗಿದೆ ಮತ್ತು ಅತಿ ಮುಖ್ಯವಾಗಿರುತ್ತದೆ. ಜಿ.ಎಸ್.ಟಿಯನ್ನು ಪಾಲಿಸೋಣ ಜಿ.ಎಸ್.ಟಿಯ ಜೊತೆಗೆ ಸಾಗೋಣ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿ ಉದಯ್‍ಕುಮಾರ್,ಕೇಂದ್ರ ತೆರಿಗೆ ಅಧಿಕಾರಿ (ಸಿ.ಜಿ.ಎಸ್.ಟಿ)ಎಂ.ಜಿ.ಕೃಷ್ಣನ್, ಸರಕು ಮತ್ತು ಸೇವಾ ತೆರಿಗೆ ಅಧಿಕಾರಿ ವಾರೇಶ್.ಬಿ.ಸಂಗೊಂದಿ ಹಾಗೂ ಲೆಕ್ಕ ಪರಿಶೋದಕ ಸಂಘದ ಸದಸ್ಯರು ಹಾಜರಿದ್ದರು.