×
Ad

ಆಸ್ಪತ್ರೆ ವೈದ್ಯರ, ಸಿಬ್ಬಂದಿಗಳ ಕೊರತೆ ನಿವಾರಿಸಲು ಹೆಚ್.ಡಿ. ರೇವಣ್ಣ ಒತ್ತಾಯ

Update: 2017-08-23 20:03 IST

ಹಾಸನಲ, ಆ. 23: ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಹಾಗೂ ವೈದ್ಯೇತರ ಸಿಬ್ಬಂದಿಯನ್ನು ಕೂಡಲೇ ಭರ್ತಿ ಮಾಡಲು ಮುಂದಾಗುವಂತೆ ಸರಕಾರಕ್ಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯಿಸಿದರು.

  ನಗರಸ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ವೈದ್ಯರ ಹಾಗೂ ವಿವಿಧ ಸಿಬ್ಬಂದಿಗಳ ಕೊರತೆಯನ್ನು ಪ್ರತಿನಿತ್ಯ ಎದುರಿಸಬೇಕಾಗಿದೆ. 76 ವೈದ್ಯರ ಕೊರತೆ, 308 ಒಟ್ಟು ಶುಶ್ರೂಕಿಯ ಹುದ್ದೆಯಲ್ಲಿ 102 ಖಾಲಿ ಹುದ್ದೆ ಹಾಗೂ 107 ಫಾರ್ಮಸಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ ಎಂದರು. ಇನ್ನು ಗ್ರಾಮೀಣ ಭಾಗಗಳಲ್ಲಿ ವೈದ್ಯರಿಲ್ಲದೆ ಶುಶ್ರೂಕಿಯರೇ ನಿರ್ವಹಿಸಬೇಕಾಗಿದೆ.

ಬರಗಾಲ ಇರುವುದರಿಂದ ನಾನಾ ಸಾಂಕ್ರಮಿಕ ರೋಗಗಳು ಉದ್ಭವಿಸುತ್ತದೆ. ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಇರುವುದರಿಂದ ಅನೇಕರು ಖಾಸಗಿ ಆಸ್ಪತ್ರೆಯತ್ತ ವಾಲಬೇಕಾಗಿದೆ ಎಂದು ಆತಂಕವ್ಯಕ್ತಪಡಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಹಲವಾರು ತಜ್ಞ ವೈದ್ಯರ ಕೊರತೆ ಇದೆ. ಇದರಿಂದ ಗ್ರಾಮೀಣ ಭಾಗದಿಂದ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ತೊಂದರೆ ಪಡುತ್ತಾ ಖಾಸಗಿ ನರ್ಸಿಂಗ್ ಹೋಂನ್ನು ಅವಲಂಭಿಸುವಂತಾಗಿದೆ ಎಂದು ರೇವಣ್ಣ ದೂರಿದರು. ಜಿಲ್ಲಾ ಆಸ್ಪತ್ರೆಯಲ್ಲಿ ನಾನಾ ವಿಭಾಗದ ತಜ್ಞರ ಕೊರತೆ ಹೆಚ್ಚು ಕಾಣಲಾಗುತ್ತಿದೆ ಎಂದು ಹೇಳಿದರು.

   ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ಈಗಾಗಲೇ 6 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ. ಮುಂದುವರೆದರೇ ಮುಂದಿನ ದಿನಗಳಲ್ಲಿ ಜಿಲ್ಲೆ ಒಳಗೆ ಕುಡಿಯುವ ನೀರಿಗೂ ಸಮಸ್ಯೆಯುಂಟಾಗಲಿದೆ ಎಂದು ಎಚ್ಚರಿಸಿದರು. ಜಿಲ್ಲೆಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ.

ಜಿಲ್ಲೆಯ ಜಾನುವಾರುಗಳಿಗೆ ಮೇವಿನ ಕೊರತೆ ಇದೆ. ಈ ಸಂದರ್ಭದಲ್ಲಿ ಜಲಾಶಯದಿಂದ ನದಿಗೆ ನೀರು ಬಿಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ಇನ್ನು ಗ್ರಾಮೀಣ ಜನರು ಕಂದಾಯ ಇಲಾಖೆಗೆ ಬಂದರೇ ಗ್ರಾಮಲೆಕ್ಕಗಿರು ಶೋಷಣೆ ಮಾಡುತ್ತಾರೆ. ಬಡವರು ಯಾರನ್ನು ನೋಡದೆ ಹಿಂಸಿಸುತ್ತಿದ್ದಾರೆ ಎಂದು ಇದೆ ವೇಳೆ ದೂರಿದ ಅವರು ಮುಂದಿನ ದಿನಗಳಲ್ಲಿ ಅಂತಹ ಅಧಿಕಾರಿಗಳಿಗೆ ಬೃಹತ್ ಸನ್ಮಾನ ಸಮಾರಂಭ ಹಮಿಕೊಳ್ಳುವುದಾಗಿದೆ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News