ಆ.26 ರಂದು ಸೀತಾರಾಮ್ ಕೆದಿಲಾಯರಿಗೆ ಅಭಿನಂದನಾ ಕಾರ್ಯಕ್ರಮ
ಹಾಸನ, ಆ. 23: ಭಾರತ್ ಪರಿಕ್ರಮ ಯಾತ್ರಾ ಅಭಿನಂದನಾ ಸಮಿತಿ ಭಾರತ ಪರಿಕ್ರಮ ಯಾತ್ರೆಯನ್ನು ಐದು ವರ್ಷಗಳಲ್ಲಿ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಆರ್.ಎಸ್.ಎಸ್. ಹಿರಿಯ ಪ್ರಚಾರಕರಾದ ಸೀತಾರಾಮ್ ಕೆದಿಲಾಯರಿಗೆ ಆಗಸ್ಟ್ 26ರ ಶನಿವಾರ ಶ್ರೀ ಶಂಕರಮಠದ ಆವರಣ, ಶ್ರೀ ಭಾರತೀ ತೀರ್ಥ ಕೃಪಾದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕನ್ಯಾಕುಮಾರಿಯಲ್ಲಿ 2012 ಆಗಸ್ಟ್ 9 ರಂದು ಭಾರತ್ ಪರಿಕ್ರಮ ಯಾತ್ರಾ ಆರಂಭಗೊಂಡು 2017 ಜುಲೈನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ವೇಳೆ 23 ರಾಜ್ಯಗಳಲ್ಲಿ ಯಾತ್ರಾ ಹಾದುಹೋಗಿದೆ. ಸುಮಾರು 2350 ಹಳ್ಳಿಗಳಿಗೆ ಬೇಟಿ ನೀಡಿದೆ. 23 ಸಾವಿರದ 100 ಕಿಲೋಮೀಟರ್ ಸಮಚಾರ ಮಾಡಿದೆ. ಭಾರತ ಪರಿಕ್ರಮವನ್ನು ಯಶಸ್ವಿಯಾಗಿ ಮುಗಿಸಿದ ಶ್ರೀ ಸೀತಾರಾಮ್ ಕೆದಿಲಾಯರು ಇದೆ ಶನಿವಾರ ನಗರಕ್ಕೆ ಆಗಮಿಸುತ್ತಿದ್ದು, ಎಲ್ಲಾರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಅಭಿನಂದನ ಸಮಿತಿ ಅಧ್ಯಕ್ಷ ಎಂ.ಎಸ್. ಶ್ರೀಕಂಠಯ್ಯ, ಸಂಚಾಲಕ ಪರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.