ಬ್ಯಾಂಕಿಂಗ್ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಆಹ್ವಾನ
ಹಾಸನ, ಆಗಸ್ಟ್ 23: ಭಾರತದ 20 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಪ್ರೊಬೇಷನರಿ ಆಫೀಸರ್ಸ್ ಹುದ್ದೆಗಳನ್ನು ಒಂದೇ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ‘ಆನ್‍ಲೈನ್‘ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.
ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ 20 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಒಂದು ವರ್ಷದವರೆಗೆ ನೇರವಾಗಿ ಸಂದರ್ಶನಕ್ಕೆ ಅರ್ಹತೆ ಪಡೆಯಬಹುದು. ಪ್ರತಿಯೊಂದು ಬ್ಯಾಂಕಿನ ನೇಮಕಾತಿಗೆ ಪ್ರತ್ಯೇಕ ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ.
ವಿದ್ಯಾರ್ಹತೆ: - ದಿನಾಂಕ:05-09-2017 ಕ್ಕೆ ಯಾವುದಾದರೂ ಪದವಿ ತೇರ್ಗಡೆ ಹೊಂದಿರಬೇಕು.
ವಯೋಮಿತಿ: - ದಿನಾಂಕ: 01-08-2017 ಕ್ಕೆ ಕನಿಷ್ಟ 20 ವರ್ಷ ತುಂಬಿರಬೇಕು. ಗರಿಷ್ಟ 30 ವರ್ಷ ಮೀರಿರಬಾರದು. (ಪರಿಶಿಷ್ಟಜಾತಿ/ಪಂಗಡ 5 ವರ್ಷಗಳು & ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ಇರುತ್ತದೆ)
ಪರೀಕ್ಷಾ ವಿಧಾನ: ಪರೀಕ್ಷೆಯು ಮೂರು ವಿಧಗಳಲ್ಲಿ ನಡೆಯುತ್ತದೆ 1) ಪೂರ್ವಾಭಾವಿ ಪರೀಕ್ಷೆ, 2) ಮುಖ್ಯಪರೀಕ್ಷೆ ಮತ್ತು 3) ಸಂದರ್ಶನ
ಕರ್ನಾಟಕದಲ್ಲಿರುವ ಪರೀಕ್ಷಾ ಕೇಂದ್ರಗಳು: ಬೆಳಗಾವಿ, ಬೆಂಗಳೂರು, ಬೀದರ್, ಗುಲ್ಬರ್ಗಾ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.
ಅರ್ಜಿ ಸಲ್ಲಿಸುವ: ಸಂಸ್ಥೆಯ www.ibps.in ಈ ವೆಬ್‍ಸೈಟ್‍ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-09-2017
ಹೆಚ್ಚಿನ ಮಾಹಿತಿಗಾಗಿ: ಅಧಿಸೂಚನೆ, ಪಠ್ಯಕ್ರಮ, ಶುಲ್ಕ, ಪರೀಕ್ಷಾ ವಿಧಾನ, ಮೀಸಲಾತಿ ಮತ್ತು ಇತ್ಯಾದಿ ಮಾಹಿತಿಗಾಗಿ ಮೇಲೆ ತಿಳಿಸಿರುವ ವೆಬ್‍ಸೈಟ್ ವಿಳಾಸವನ್ನು ನೋಡಿ ಅಥವಾ ಉಪಮುಖ್ಯಸ್ಥರು, ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು. ವಿಶ್ವವಿದ್ಯಾನಿಲಯ, ಮೈಸೂರು. ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಿ.