×
Ad

ಶ್ರೀರಂಗಪಟ್ಟಣ: ಇಬ್ಬರು ಮಹಿಳೆಯರು ನಾಪತ್ತೆ

Update: 2017-08-23 20:37 IST

ಮಂಡ್ಯ, ಆ.23: ಶ್ರೀರಂಗಪಟ್ಟಣ ಸಮೀಪದ ಗಂಜಾಂನಿಂದ ಇಬ್ಬರು ಮಹಿಳೆಯರು ನಾಪತ್ತೆಯಾಗಿದ್ದಾರೆ. ವಿವಾಹಿತೆ ಪ್ರಿಯದರ್ಶಿನಿ(26) ಮತ್ತು ಅವಿವಾಹಿತೆ ಮಹಾದೇವಿ(31) ನಾಪತ್ತೆಯಾದವರು.

ಪುಟ್ಟೇಗೌಡ ಲತಾ ದಂಪತಿ ಪುತ್ರಿಯಾದ ಪ್ರಿಯದರ್ಶಿನಿಯನ್ನು ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರದ ನವೀನ ಎಂಬುವರ ಜತೆ ಒಂದೂವರೆ ವರ್ಷದ ಹಿಂದೆ ಮದುವೆ ಮಾಡಿದ್ದು, ಬಾಣಂತನಕ್ಕೆ ತವರು ಮನೆಯಲ್ಲಿದ್ದರು ಎನ್ನಲಾಗಿದೆ,

ಗೌರಿ ಹಬ್ಬದ ಬಟ್ಟೆ ತರಲು ಗೆಳತಿ ಮಹಾದೇವಿ ಜತೆ ಮಂಗಳವಾರ ಶ್ರೀರಂಗಪಟ್ಟಣಕ್ಕೆ ಹೋಗಿದ್ದ ಪ್ರಿಯದರ್ಶಿನಿ ಮತ್ತು ಮಹಾದೇವಿ ಇಬ್ಬರೂ ಮನೆಗೆ ಹಿಂದಿರುಗಿಲ್ಲ ಎಂದು ಪ್ರಿಯದರ್ಶಿನಿ ತಂದೆ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಶ್ರೀರಂಗಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News