ಮಂಡ್ಯ: ಆ.27 ರಂದು ಚಿಂತನ ಮಂಥನ ಕಾರ್ಯಕ್ರಮ
Update: 2017-08-24 23:35 IST
ಮಂಡ್ಯ, ಆ.24: ಭೂಮಿ ಬಳಗ ಟ್ರಸ್ಟ್, ಕರ್ನಾಟಕ ಸಂಘ ಮತ್ತು ವಿ.ಸಿ. ಫಾರಂನ ಕೃಷಿ ಸಂಶೋಧನಾ ಕೇಂದ್ರದ ವತಿಯಿಂದ ಆ.27ರಂದು ಬೆಳಗ್ಗೆ 11ಕ್ಕೆ ನಗರದ ರೈತಸಭಾಂಗಣದಲ್ಲಿ ರೈತರ ಜ್ವಲಂತ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಚಿಂತನ ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶ್‍ಗೌಡ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕಷ್ಣಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಬೆಂಗಳೂರು ಕಷಿ ವಿವಿ ವಿಶ್ರಾಂತ ಕುಲಪತಿ ಡಾ.ನಾರಾಯಣಗೌಡ, ಮನೋಶಾಸ್ತ್ರಜ್ಞ ಡಾ.ಜಗದೀಶ್, ನಿವತ್ತ ಐಎಎಸ್ ಅಧುಕಾರಿ ಟಿ.ತಿಮ್ಮೇಗೌಡ, ವಿ.ಸಿ.ಫಾರಂ ಕೃಷಿ ವಿವಿ ಡೀನ್ ಡಾ.ಶಿವಶಂಕರ್ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ಟಿ.ಚಂದು, ಪ್ರೊ.ಎಸ್.ಬಿ.ಶಂಕರೇಗೌಡ, ಕೀಲಾರ ಕಷ್ಣೇಗೌಡ ಉಪಸ್ಥಿತರಿದ್ದರು.