ಬಾಗೇಪಲ್ಲಿ : ರಸ್ತೆ ಕಾಮಗಾರಿಗೆ ಚಾಲನೆ
ಬಾಗೇಪಲ್ಲಿ,ಆ.26: ಜನರ ಸೇವೆಗಾಗಿ ಶಾಸಕರಾಗಿದ್ದೇನೆ ಹೊರತು ಕ್ಷೇತ್ರದಲ್ಲಿ ಹಣ ಮಾಡಲು ಅಲ್ಲ. ಕ್ಷೇತ್ರದ ಬೆಳವಣಿಗೆಗೆ ನಾನು ರಾಜಕೀಯ ಮಾಡುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ತಾಲೂಕಿನ ಮಿಟ್ಟೇಮರಿ ಗಾಮದಲ್ಲಿ ಹಮ್ಮಿಕೊಂಡಿದ್ದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 2 ಕೋಟಿ 93 ಲಕ್ಷ ವೆಚ್ಚದಲ್ಲಿ 4.21 ಕಿ.ಮೀ ರಸ್ತೆಯ ಮಿಟ್ಟೇಮರಿಯಿಂದ ಗುಬ್ಬೋಳ್ಳಪಲ್ಲಿ, ಚಿನ್ನಓಬಯ್ಯಗಾರಿಪಲ್ಲಿ, ಗೊಲ್ಲಪಲ್ಲಿ ರಸ್ತೆಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ರಸ್ತೆ ಮಾಡಿಸುವ ಗುರಿ ನನಗೆ ಇದೆ. ಶಾಸಕರಾದ ಮೇಲೆ ಸುಮಾರು 100 ಕಿ.ಮೀ ನಷ್ಟು ರಸ್ತೆ ಕಾಮಗಾರಿ ಮಾಡಿಸಲಾಗಿದೆ ಎಂದು ತಿಳಿಸಿದರು.
ತಾವು ಶಾಸಕರಾಗಿರುವುದು ಜನರ ಸೇವೆಗಾಗಿ, ರಾಜಕೀಯ ಮಾಡುವುದು ಜನರಿಗಾಗಿ, ಮೂಲಭೂತ ಸೌಲಭ್ಯಗಳಿಗಾಗಿ, ರಾಜಕೀಯ ಇದ್ದರೂ, ಇಲ್ಲದಿದ್ದರೂ ನನ್ನ ಸಮಾಜ ಸೇವೆ ಮುಂದುವರೆಯುತ್ತದೆ. ಕಾಮಗಾರಿಗಳು ಗುಣಮಟ್ಟದಿಂದ ಮಾಡದಿದ್ದರೆ, ನಾವು ಜನರಿಗೆ ಮೋಸ ಮಾಡಿದಂತೆ ಆಗುತ್ತದೆ. ಗುಣಮಟ್ಟದ ಕಾಮಗಾರಿಗಳು ಕ್ಷೇತ್ರದಲ್ಲಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಮುಖಂಡರಾದ ರಘುವೀರಶರ್ಮ, ಎಪಿಎಂಸಿ ನಿದೇರ್ಶಕ ರಾಮರೆಡ್ಡಿ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಮುಖಂಡರು ಹಾಜರಿದ್ದರು.