×
Ad

ಬಾಗೇಪಲ್ಲಿ : ರೈತ ಜಾಗೃತಿ ಜಾಥ

Update: 2017-08-26 16:21 IST

ಬಾಗೇಪಲ್ಲಿ,ಆ.26: ಪ್ರತಿ ರೈತನ ಜಮೀನಿಗೆ ಕೃಷಿಗಾಗಿ ನೀರು,ರೈತರ ಪ್ರತಿ ಬೆಳೆಗೆ ನ್ಯಾಯಯುತ ಬೆಲೆ ಸಿಗುವವರೆಗೆ ಸರ್ಕಾರಿ ನೌಕರರಿಗೆ ಸಮಾನವಾಗಿ ರೈತರ  ವಾರ್ಷಿಕ ಆದಾಯ ಹೆಚ್ಚಿಸುವವರೆಗೆ ರೈತ ಸಂಪೂರ್ಣ ಸಾಲಗಳನ್ನು ಸರ್ಕಾರವೆ  ತೀರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಒತ್ತಾಯಿಸಿದರು.

ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂಭಾಗದಲ್ಲಿ ರೈತ ಜಾಗೃತಿ ಜಾಥ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಹಳ್ಳಿಗರನ್ನು ಸುಧಾರಿಸುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ನೀರಾವರಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿವೆ.ನಿರ್ಲಕ್ಷದ ಕಾರಣ ಸದಾ ಬರಗಾಲಕ್ಕೆ ತುತ್ತಾಗಬೇಕಾಗುತ್ತಿದೆ.ರೈತರ ಉತ್ಪನ್ನಗಳಿಗೆ ಸೂಕ್ತವಾದ ಬೆಲೆ ಕೊಡಿಸಲು ಸರ್ಕಾರಗಳೂ ಪ್ರಯತ್ನ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಹಳ್ಳಿ ರೈತರ ಮಕ್ಕಳ ಬೇಕು-ಬೇಡಗಳನ್ನು ಯಾವಾಗಲೂ ಕೇಳಿಸಿಕೊಳ್ಳಲೇ ಇಲ್ಲ. ರೈತ ಮಹಿಳೆಯರಿಗೆ ಕೃಷಿಯಿಂದ ಆರ್ಥಿಕ ಚೈತನ್ಯವನ್ನು ನೀಡಿ ಕೃಷಿ ಆಧಾರಿತ ಗ್ರಾಮೀಣ ಕೈಗಾರಿಕೆಗಳನ್ನು ತೆಗೆದು ಉದ್ಯೋಗಗಳನ್ನು ಸೃಷ್ಠಿ ಮಾಡಿ ರೈತ ಮಕ್ಕಳ ಜೀವನವನ್ನು ಸುಧಾರಿಸುವ ಯಾವುದೇ ಕಾರ್ಯಕ್ರಮಗಳನ್ನು ಕೈಗೊಳ್ಳಲಿಲ್ಲ. ಬದಲಿಗೆ ಸ್ತೀಶಕ್ತಿ ಸ್ವಸಹಾಯ ಸಂಘಗಳನ್ನು ನಿರ್ಮಾಣ ಮಾಡಿ ಮೂರು ಕಾಸು ಕೈಗೆಕೊಟ್ಟು ಬಡ್ಡಿವ್ಯವಹಾರ ಮಾಡಲು ದೂಡಿರುವುದು ಗೌರವಾನ್ವಿಕ ಕೃಷಿ ಮಹಿಳೆಯರನ್ನು ಅಣಕಿಸಿದಂತಾಗಿದೆ ಎಂದ ಅವರು ರೈತರ ಎಲ್ಲಾ ರೀತಿಯ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಒತ್ತಾಯಿಸಿ ಇದೇ ತಿಂಗಳ 28 ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿಯನ್ನು ನಡೆಸಲಾಗುವುದು ಮತ್ತು ರೈತರಿಂದ ಅರ್ಜಿಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ಮಾತನಾಡಿ, ದೇಶದ ಶ್ರೀಮಂತರ  6 ಲಕ್ಷ ಕೋಟಿ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿದೆ. ಲಕ್ಷಾಂತರ ಕೋರಿ ತೆರಿಗೆ ರಿಯಾಯಿತಿ ನೀಡಲು ಸಾಧ್ಯವಾಗಿದೆ. ಆದರೆ ಸಂಕಷ್ಠದಲ್ಲಿರುವ ರೈತರ ಸಾಲ ಮನ್ನಾ ಮಾಡುವಂತೆ ಕೇಳಿದರೆ ಬ್ಯಾಂಕುಗಳು ಹೇಗೆ ಕೆಲಸ ನಡೆಸುವುದು ಎಂದು ತರ್ಕವಿಲ್ಲದಂತೆ ಮಾತನಾಡುತ್ತಾರೆ. ರೈತರ ಎಲ್ಲಾ ಸಾಲಗಳನ್ನು ಮನ್ನಾಮಾಡಬೇಕು. ರೈತರನ್ನು ಋಣಮುಕ್ತರನ್ನಾಗಿ ಮಾಡಬೇಕು. ಪ್ರತಿ ಬಜೆಟ್ ನಲ್ಲಿ ರೈತರಿಗೆ 65 ಭಾಗ ಮೀಸಲು ನೀಡಬೇಕು. ಅದೇ ಮಾದರಿಯಲ್ಲಿ ಉದ್ಯೋಗ ಮೀಸಲಾತಿಯನ್ನು ನೀಡಬೇಕು. ಎಂದ ಅವರು ಯಾವುದೇ ರೈತ ಸಾಲಗಾರನಲ್ಲ ಸರ್ಕಾರವೇ ಬಾಕಿದಾರ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಎಸ್.ಲಕ್ಷ್ಮಣರೆಡ್ಡಿ ಮಾತನಾಡಿದರು. ಜಿಲ್ಲಾಧ್ಯಕ್ಷರಾದ ಎಂ.ಬಿ.ಶ್ರೀನಿವಾಸರೆಡ್ಡಿ, ಕಾನೂನು ಸಲಹೆಗಾರ ಎಂ.ಆರ್.ಮಂಜುನಾಥ್, ಉಪಾಧ್ಯಕ್ಷ ಸಹದೇವ್, ನಾರಾಯಣಸ್ವಾಮಿ, ಖಜಾಂಚಿ ಪ್ರಭಾಕರ, ಬಿ.ಎಂ.ಬಯ್ಯಪ್ಪ. ಮಹಿಳಾ ಅಧ್ಯಕ್ಷೆ ಅಸಾಮಾಸುಲ್ತಾನ್,ನಗೀನಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News