×
Ad

ಶಿಡ್ಲಘಟ್ಟ : ಬಕ್ರೀದ್‌ ಹಬ್ಬ - ಪೊಲೀಸರಿಂದ ಶಾಂತಿಸಭೆ

Update: 2017-08-26 16:26 IST

ಶಿಡ್ಲಘಟ್ಟ,ಆ.26 : ಹಬ್ಬ ಆಚರಣೆಗಳು ಸೌಹಾರ್ದತೆಯಿಂದ ಕೂಡಿರಬೇಕು. ಕಾನೂನು ಕೈಗೆತ್ತಿಕೊಂಡು, ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವಂತೆ ನಡೆದುಕೊಳ್ಳುವವರ ಮೇಲೆ ರೌಡಿಶೀಟರ್ ಕೇಸು ದಾಖಲು ಮಾಡಲಾಗುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ ಹೇಳಿದರು.

ನಗರದ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಬಕ್ರಿದ್ ಹಬ್ಬದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ಧರ್ಮಗಳಿರಲಿ ಆಚರಣೆಗಳು ಶಾಂತಿಯುತವಾಗಿರಬೇಕು. ಎಲ್ಲಾ ಸಮುದಾಯಗಳು ಸಾಮೂಹಿಕವಾಗಿ ಸಹಕಾರ ಕೊಡುವಂತಿರಬೇಕು. ಈಗಾಗಲೇ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿರುವವರು ಪೊಲೀಸ್ ಇಲಾಖೆಯಿಂದ ಬಂದಿರುವ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಗಣಪತಿಗಳ ಪ್ರತಿಷ್ಠಾಪನೆ ಮಾಡಿರುವ ಕಡೆಯಲ್ಲಿ ಆಯೋಜಕರು ಸೂಕ್ತ ಭದ್ರತೆಯಿಂದ ಗಮನಹರಿಸಬೇಕು. ಯಾರೇ ಕಿಡಿಗೇಡಿಗಳು ಶಾಂತಿಕದಡುವ ಕೆಲಸ ಮಾಡಿದರೆ, ಅಂತಹವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ.

 ಬಕ್ರಿದ್ ಆಚರಣೆಯ ವೇಳೆಯು ಎಲ್ಲಾ ಸಮುದಾಯಗಳು ಶಾಂತಿಯಿಂತ ವರ್ತನೆ ಮಾಡಬೇಕು. ನಾಗರಿಕರ ಶಾಂತಿಗೆ ಭಂಗವಾಗಬಾರದು. ಸಂಚಾರಕ್ಕೆ ಅಡಚರಣೆ ಉಂಟಾಗಬಾರದು ಎಂದರು.

 ಶಿಡ್ಲಘಟ್ಟದ ಇತಿಹಾಸದಲ್ಲಿ ಯಾವುದೇ ಹಬ್ಬಗಳ ಆಚರಣೆಯ ವೇಳೆಯಲ್ಲಿ ಯಾವುದೇ ಅಹಿತರಕರ ಘಟನೆಗಳು ನಡೆದಿಲ್ಲ, ಮುಂದೆ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ನಾಗರಿಕರು  ಹೇಳಿದರು.

 ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಕೃಷ್ಣಮೂರ್ತಿ, ಸಿಪಿಐ ವೆಂಕಟೇಶ್, ಪಿಎಸ್‍ಐಗಳಾದ ಪ್ರದೀಪ್ ಪೂಜಾರಿ, ವಿಜಯ್ ರೆಡ್ಡಿ, ನವೀನ್, ಉಹತಹಶೀಲ್ದಾರ್ ಮುನಿಕೃಷ್ಣಪ್ಪ, ಹಾಗೂ ಹಿಂದು ಮುಸ್ಲಿಂ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News