ಬಾಲಕಿ ಅಪಹರಣ ಯತ್ನ: ದೂರು ದಾಖಲು
Update: 2017-08-26 22:06 IST
ನಾಗಮಂಗಲ, ಆ.26: ಅಪ್ರಾಪ್ತ ಯುವತಿಯನ್ನು ಅಪಹರಿಸಲು ಯತ್ನಿಸಿದ ಮೂರು ಯುವಕರನ್ನು ಗ್ರಾಮಸ್ಥರು ಥಳಿಸಿ ದೂರು ದಾಖಲಿಸಿದ ಘಟನೆ ತಾಲೂಕಿನ ತೊರೆಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಂಧಿತರನ್ನು ಬೆಂಗಳೂರಿನ ಗೊಲ್ಲರಹಟ್ಟಿಯ ಬಾಲಾಜಿ, ರಮೇಶ್ ಮತ್ತು ಗುರು ಎಂದು ತಿಳಿದು ಬಂದಿದೆ.
ಮೂವರು ಆರೋಪಿಗಳು, ಶಾಲೆಗೆ ತೆರಳುತ್ತಿದ್ದ 15 ವರ್ಷದ ಅಪ್ರಾಪ್ತ ಯುವತಿಯನ್ನು ಅಪಹರಿಸಿ ಕಾರಿಗೆ ಹಾಕಿಕೊಂಡು ಪರಾರಿಯಾಗುತ್ತಿದ್ದಾಗ, ಹಿಂಬಾಲಿಸಿದ ಗ್ರಾಮಸ್ಥರು ಮಲ್ಲನಕೊಪ್ಪಲು ಗ್ರಾಮದ ಬಳಿ ಹಿಡಿದು ಬಾಲಕಿಯನ್ನು ರಕ್ಷಿಸಿ ಅಪಹರಣಕಾರರಿಗೆ ಥಳಿಸಿದ್ದಾರೆ.
ಸುದ್ದಿ ತಿಳಿದ ಶಾಸಕ ಎನ್.ಚಲುವರಾಯಸ್ವಾಮಿ, ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಸಿಗೊಳಿಸಿದರು. ಬಳಿಕ ಆರೋಪಿಗಳನ್ನು ಪಿಎಸ್ಚಿಸೈ ಚಿದಾನಂದ್ ಬಂಧಿಸಿ ಕರೆದೊಯ್ದರು.
ಬಾಲಕಿ ತಂದೆ ತಿಮ್ಮಪ್ಪ ನೀಡಿದ ದೂರಿನ ಹಿನ್ನೆಲೆಯಲ್ಲಿ ಯುವಕರ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ನ್ಯಾಯಾಂಗ ಬಂಧನದಲ್ಲಿಡುವಂತೆ ಕೋರ್ಟ್ ಆದೇಶಿಸಿದೆ.