ಕಸಾಪದ ಸದಸ್ಯತ್ವ ಪಡೆದು ಕನ್ನಡಿಗರ ಒಗ್ಗಟ್ಟು ತೋರಿಸಬೇಕು: ಶಾಸಕ ಎಚ್.ಎಸ್.ಶಿವಶಂಕರ್
ಹರಿಹರ, ಆ.26: ಕನ್ನಡದ ನಾಡು ನುಡಿಯ ಕೆಲಸವೆಂದರೆ ಕೇವಲ ಕಾರ್ಯಕ್ರಮಗಳನ್ನು ಮಾಡುವುದು ಜೈ ಘೋಷ ಹೇಳುವುದಲ್ಲ. ಪ್ರತಿಯೊಬ್ಬ ಕನ್ನಡಿಗರೂ ಕಸಾಪದ ಸದಸ್ಯತ್ವ ಪಡೆದು ಕನ್ನಡಿಗರ ಒಗ್ಗಟ್ಟನ್ನು ತೋರಿಸಬೇಕಾಗಿದೆ ಎಂದು ಶಾಸಕ ಹೆಚ್.ಎಸ್.ಶಿವಶಂಕರ್ ಹೇಳಿದರು.
ನಗರದ ಆರೋಗ್ಯಾಧಿಕಾರಿಗಳ ಕಟ್ಟಡದಲ್ಲಿ ತಾಲೂಕಿನ ನೂತನ ಕಸಾಪ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನ ದಕ್ಷಿಣ ಕರ್ನಾಟಕದವರಿಗೆ ದಕ್ಕುತ್ತಿದೆ. ಕೆಲವೊಮ್ಮೆ ಮಾತ್ರ ಉತ್ತರ ಕರ್ನಾಟಕದವರಿಗೆ ದೊರೆತಿದೆ. ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದವರು ಸೇರಿ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಬೇಕಾಗಿದೆ ಎಂದ ಅವರು, ರಾಜ್ಯಾಧ್ಯಕ್ಷ ಮನು ಬಳಿಗಾರರವರು ಉತ್ತಮವಾದ ರೀತಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯೊಂದರಲ್ಲಿಯೇ ಎರಡು ತಿಂಗಳಲ್ಲಿ ಹದಿನೇಳು ಸಾವಿರ ಸದಸ್ಯತ್ವ ನೋಂದಣಿಯಾಗಿದೆ. ಸರ್ಕಾರಿ ನೌಕರರು, ಶಿಕ್ಷಕರು, ಕನ್ನಡಪರ ಸಂಘಟನೆಯವರು, ಕಸಾಪ ಪದಾಧಿಕಾರಿಗಳು ಸದಸ್ಯತ್ವ ಪಡೆಯಿರಿ ಎಂದರು.
ಈ ವೇಳೆ ವೇದಮೂರ್ತಿ, ಕೆ.ಎಂ. ವಿಶ್ವನಾಥಯ್ಯ ಶಾಸ್ತ್ರಿಗಳು ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಗೌರವ ಕಾರ್ಯದರ್ಶಿಗಳಾದ ಮಂಜುನಾಥ ಕೆ.ಆರ್. ಹಾಗೂ ಕರಿಬಸಪ್ಪ ಬಸಲಿ, ಕೋಶಾಧ್ಯಕ್ಷ ಹನುಂತಪ್ಪ ಕೆ.ಎನ್. ಹಿರಿಯ ಸಾಹಿತಿಗಳಾದ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ, ಪ್ರೊ. ಸಿ.ವಿ. ಪಾಟೀಲ್, ಬಿ. ಷಣ್ಮುಖಪ್ಪ, ಜೆ ವಸುಪಾಲಪ್ಪ, ಡಿ.ಎಂ. ಮಂಜುನಾಥಯ್ಯ ನಗರಸಭಾ ಸದಸ್ಯರಾದ ನಾಗರಾಜ ಮೆಹರ್ವಾಡೆ ಹಾಗೂ ಹಬೀಬುಲ್ಲಾ, ಶಿಕ್ಷಕರಾದ ಎಚ್.ಎಂ. ನಿಂಗಪ್ಪ, ರಾಮಪ್ಪ ಸೋಮಣ್ಣೇರ, ಜಿ. ನಂಜಪ್ಪ, ಲೀಲಾ ಎನ್.ಬಿ, ಸೌಭಾಗ್ಯ, ಇನಾಯತ್ ಉಲ್ಲಾ ಎಸ್, ರಿಯಾಝ್ ಅಹ್ಮದ್, ರೇವಣನಾಯ್ಕ, ಈಶಪ್ಪ ಬೂದಿಹಾಳ್, ವಿಜಯಮಹಂತೇಶ್, ಎಂ.ವಿ. ಹೊರಕೇರಿ. ಎ.ಕೆ. ಭೂಮೇಶ್, ಎಂ. ಉಮ್ಮಣ್ಣ, ಮಂಜಪ್ಪ ಬಿದರಿ, ಶರಣ್ ಕುಮಾರ್ ಹೆಗಡೆ, ಎಚ್.ಕೆ. ಕೊಟ್ರಪ್ಪ, ಬಿ.ಎನ್. ವೀರಪ್ಪ, ಎಸ್. ಆರ್. ಮಠ, ಕರವೇ ನಾಗರಾಜ ಗೌಡ. ದೇವೇಂದ್ರಪ್ಪ ಕುಣೆಬೆಳಕೆರೆ, ಶ್ರೀ ಶಾರದೇಶಾನಂದ ಶ್ರೀ, ಸುಬ್ರಮ್ಮಣ್ಯ ನಾಡಿಗೇರ, ಸದಾನಂದ ಎಚ್.ಎಂ, ಎ.ಶಿವಪ್ಪ, ಮಲ್ಲಿಕಾರ್ಜುನ ದೇವಾಂಗದ ಉಪಸ್ಥಿತರಿದ್ದರು.