ಕಾರು-ಟೆಂಪೋ ಢಿಕ್ಕಿ: ನಾಲ್ವರಿಗೆ ಗಾಯ
Update: 2017-08-26 23:58 IST
ಕುಶಾಲನಗರ, ಆ.26: ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಿಹಾರ ರಾಜ್ಯದ ಪಾಟ್ನಾ ಮೂಲದ ಕುಟುಂಬದವರು ಕಾರೊಂದನ್ನು ಬೆಂಗಳೂರಿನಲ್ಲಿ ಬಾಡಿಗೆಗೆ ಪಡೆದು ಕುಶಾಲನಗರದ ಕಾವೇರಿ ನಿಸರ್ಗಧಾಮದ ಬಳಿಗೆ ಬರುತ್ತಿದ್ದ ವೇಳೆ ಮಡಿಕೇರಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಟೆಂಪೋಂದಕ್ಕೆ ಢಿಕ್ಕಿಹೊಡೆದ ಪರಿಣಾಮ ಕಾರಿನಲ್ಲಿದ್ದ 4 ಜನರಿಗೆ ಗಾಯವಾಗಿದೆ.
ಕಾರು ಚಾಲಕ ದಿವ್ಯಾಸಿಂಗ್(32) ಅವರ ಬೆನ್ನಿನ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಅವರ ಸಹೋದರಿ ಶಿಕಾ ಎಂಬವರಿಗೆ ಎಡಗಾಲು ಮುರಿದಿದೆ.
ನೇಹಾ ಎಂಬವರಿಗೆ ತಲೆ ಮತ್ತು ಮುಖಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿವೆ. ಶಿವಾನಿ ಮತ್ತು ಪೂಜಾ ಎಂಬವರಿಗೂ ಸಾಧಾರಣಾ ಪೆಟ್ಟುಗಳಾಗಿದ್ದು, ಸ್ಥಳೀಯರು ಮಡಿಕೇರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ವಿಷಯ ತಿಳಿದ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಕುಶಾಲಪ್ಪ ಹಾಗೂ ಸಹದೇವ್ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.