ನೆಲ್ಲಿಕಾರು “ಮನವಿ” ಜೈನ ಮಹಿಳಾ ಸಂಘದ ವತಿಯಿಂದ ‘ಆಟಿಡೊಂಜಿ ಕೂಟ’
Update: 2017-08-27 17:27 IST
ಮೂಡುಬಿದಿರೆ,ಆ.27 : ನೆಲ್ಲಿಕಾರು ಅನಂತನಾಥಸ್ವಾಮಿ ಬಸದಿಯ ಸಭಾಭವನದಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮ ಡಾ.ಸಂಧ್ಯಾ ಮಹಾವೀರ ಜೈನ್ ನಾರಾವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರತಿಮಾ ಬಾಹುಬಲಿ ಪ್ರಸಾದ್, ರತ್ನಾವತಿ ಪದ್ಮರಾಜ ಕಡಂಬ, ಲಲಿತಮ್ಮ ಆದಿರಾಜ ಮೂರಾಯ, ರತ್ನಮ್ಮ ಪದ್ಮನಾಭ ಜೈನ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.