×
Ad

ಸುಂಟಿಕೊಪ್ಪ: ಗೌರಿಗಣೇಶ ಮೂರ್ತಿಯ ವಿಸರ್ಜನೆ

Update: 2017-08-27 18:59 IST

ಸುಂಟಿಕೊಪ್ಪ,ಆ.27: ಶ್ರೀದೇವಿಯಲ್ಲಿರುವ ಅಣ್ಣಪ್ಪ ಸ್ವಾಮಿ  ದೇವಾಲಯದಲ್ಲಿ ಸೋಮವಾರ 5ನೇ ವರ್ಷದ ಗಣೇಶ ಚತುರ್ಥಿಯ ಅಂಗವಾಗಿ ವಿನಾಯಕ ಸೇವಾ ಸಮಿತಿಯ ವತಿಯಿಂದ ವಿಜ್ರಂಭಣೆಯಿಂದ ಆಚರಿಸಲಾಯಿತು.

ಬೆಳಿಗ್ಗೆ 10 ಗಂಟೆಗೆ ವಿವಿಧ ಪೂಜಾ ಕೈಂಕಾರ್ಯಗಳೊಂದಿಗೆ ಪ್ರತಿಷ್ಠಾಪಿಸಿ ದೇವಸ್ಥಾನದಲ್ಲಿ  ಸುತ್ತಮುತ್ತಲಿನ ನೂರಾರು ಭಕ್ತಾಧಿಗಳು ಬಂದುÀ ಪೂಜೆಯನ್ನು ಸಲ್ಲಿಸಿದರು.

ರಾತ್ರಿ 7 ಗಂಟೆಗೆ ವಿವಿಧ ಪೂಜಾ ಕಾರ್ಯವನ್ನು ನೆರವೇರಿಸಿದ್ದ ಭಕ್ತಾಧಿಗಳು ವಿನಾಯಕ ಸೇವಾ ಸಮಿತಿಯ  ಪದಾಧಿಕಾರಿಗಳು ಕೊಪ್ಪದ ನಾದಸ್ವರ ಡಿ.ಜೆ.ಯೊಂದಿಗೆ ಅಲಂಕೃತ ಭವ್ಯ ಮಂಟಪದಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಕುಳ್ಳಿರಿಸಿ ಪುರುಷರು, ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಮೆರವಣಿಗೆಯ ಮೂಲಕ ಸಾಗಿ ಶ್ರೀದೇವಿ ಕೆರೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News