×
Ad

ಮುಸ್ಲಿಂ ಸಮಾಜದಿಂದ ಸಾರ್ವಜನಿಕರಿಗೆ ಆ್ಯಂಬುಲೆನ್ಸ್ ಒದಗಿಸುತ್ತಿರುವುದು ಶ್ಲಾಘನೀಯ: ಡಾ. ಶಾಮನೂರು ಶಿವಶಂಕರಪ್ಪ

Update: 2017-08-27 21:52 IST

ದಾವಣಗೆರೆ, ಆ.27:  ನಗರದ ನೂರಾನಿ ಶಾದಿಮಹಲ್ ಮತ್ತು ಎಚ್‍ಕೆಜಿಎನ್ ಶಾದಿಮಹಲ್ ಬಳಿ ತಂಝೀಮುಲ್ ಮುಸ್ಲೀಮಿನ್ ಫಂಡ್ ಅಸೋಸಿಯೇಶನ್‍ನಿಂದ ನೂತನವಾಗಿ ನಿರ್ಮಿಸಿರುವ ಕಾಂಪ್ಲೆಕ್ಸ್ ಹಾಗೂ ಆ್ಯಂಬುಲೆನ್ಸ್ ಗೆ  ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ಚಾಲನೆ ನೀಡಿ ಉದ್ಘಾಟಿಸಿದರು. 

ಈ ವೇಳೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಈ ಭಾಗದಲ್ಲಿರುವ ಬಾಪೂಜಿ ಸಂಸ್ಥೆಯ ಆಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ನೀಡಲು ಸರ್ಕಾರದ ಜೊತೆ ಮಾತುಕತೆ ನಡೆಸಿದ್ದು, ಆದಷ್ಟು ಶೀಘ್ರದಲ್ಲಿ ಬಾಪೂಜಿ ಸಂಸ್ಥೆಯ ಆಸ್ಪತ್ರೆಯನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು ಎಂದ ಅವರು, ಮುಸ್ಲಿಂ ಸಮಾಜದಿಂದ ಸಾರ್ವಜನಿಕರಿಗೆ ಆ್ಯಂಬುಲೆನ್ಸ್ ಒದಗಿಸುತ್ತಿರುವುದು ಶ್ಲಾಘನೀಯ. ಇಂತಹ ಸೇವೆಗೆ ಬಿ.ಎನ್. ಕುಟುಂಬದವರು ಮುಂದಾಗಿರುವುದು ಉತ್ತಮ ಕೆಲಸ ಎಂದರು.

ಈ ಭಾಗದಲ್ಲಿ ಮಹಾನಗರ ಪಾಲಿಕೆ ಮತ್ತು ನಮ್ಮ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಇನ್ನು ಸ್ಮಾರ್ಟ್‍ಸಿಟಿಯಡಿ ಕಾಮಗಾರಿಗಳು ಹಂತಹಂತವಾಗಿ ಕಾಮಗಾರಿಗಳು ನಡೆಯಲಿವೆ. ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ನೀರು ಸರಬರಾಜಿನಲ್ಲಿ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಪ ಸದಸ್ಯ ಅಬ್ದುಲ್ ಜಬ್ಬಾರ್, ತಂಝೀಮುಲ್ ಮುಸ್ಲೀಮಿನ್ ಫಂಡ್ ಅಸೋಸಿಯೇಶನ್ ಅಧ್ಯಕ್ಷ ಸಾದೀಕ್ ಪೈಲ್ವಾನ್, ದಕ್ಷಿಣ ವಲಯ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿದರು. ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಿರಾಜ್ ಅಹ್ಮದ್, ಬಿ.ಎನ್. ಹಮೀದ್, ಬರ್ಕತ್ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಎ.ಬಿ. ರಹೀಂ, ಬುತ್ತಿಗೌಸ್, ಅಲ್ತಾಫ್, ಶೇಖ್ ಅಹ್ಮದ್, ರಫೀಕ್, ದಾದಾಪೀರ್, ಆರೀಫ್ ಪೈಲ್ವಾನ್, ಸೈಪುಲ್ಲಾ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News