×
Ad

ರೈತರು ಹೈನುಗಾರಿಕೆಯಿಂದ ಅವಲಂಬಿತರಾಗಿದ್ದಾರೆ: ಗುರುಮಲ್ಲಪ್ಪ

Update: 2017-08-27 22:55 IST

ಹನೂರು, ಆ.27: ನಮ್ಮ ಚಾಮರಾಜನಗರ ಜಿಲ್ಲೆಯಲ್ಲಿ ಭೀಕರ ಬರಗಾಲ ಇದ್ದರೂ  ರೈತರು ಜೀವನ ಸಾಗಲು ಕೃಷಿಗಿಂತಲೂ ಹೈನುಗಾರಿಕೆಯನ್ನು ಉಪಕಸಬು ಮಾಡಿ ಇದರಿಂದ ಅವಲಂಬಿತರಾಗಿದ್ದಾರೆ ಎಂದು ಚಾಮುಲ್‍ನ ಅಧ್ಯಕ್ಷ ಗುರುಮಲ್ಲಪ್ಪ ಅಭಿಪ್ರಾಯಪಟ್ಟರು.

ಹನೂರು ಕ್ಷೇತ್ರ ವ್ಯಾಪ್ತಿಯ ಪಿಜಿಪಾಳ್ಯ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಬಿಎಂಸಿ ಕೇದ್ರವನ್ನುಉದ್ಘಾಟನೆ ಮಾಡಿ ಮಾತನಾಡಿದ ಅವರು, 2016-17 ಸಾಲಿನ ಎನ್‍ಸಿಡಿಸಿ ಯೋಜನೆಯಡಿ ಆರ್ಥಿಕ ನೆರವುಗಾಗಿ ಕರ್ನಾಟಕ ಹಾಲು ಮಹಾಮಂಡಳಿ ,ಚಾಮರಾಜನಗರ ಜಿಲ್ಲೆಯ ಹಾಲು ಒಕ್ಕೂಟ ಹಾಗೂ ಶ್ರೀ ಕ್ಷೇತ್ರ ದರ್ಮಸ್ಥಳ ಕ್ಷೇತ್ರದ ಸಹಯೋಗದಲ್ಲಿ ಸುಮಾರು 5.5ಲಕ್ಷ ರೂ. ವೆಚ್ಚದಲ್ಲಿ ಈ ನೂತನ ಕಟ್ಟಡ ನಿರ್ಮಾಣವಾಗಿದೆ ಎಂದರು.

ಸರ್ಕಾರ ಹಾಲು ಉತ್ಪಾದಕರಿಗೆ ಅನೇಕ ರೀತಿಯಲ್ಲಿ ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದ್ದು, ಗುಣಮಟ್ಟದ ಹಾಲು ಪೊರೈಕೆ ಮಾಡುವ ಮೂಲಕ ಚಾಮರಾಜನಗರ ಹಾಲು ಒಕ್ಕೂಟದ ಅಭಿವೃದ್ಧಿಯೊಂದಿಗೆ ರೈತರು ಹೆಚ್ಚಿನ ಲಾಭಾಂಶ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ದ್ರುವನಾರಯಣ, ಶಾಸಕ ಆರ್. ನರೇಂದ್ರರಾಜೂ ಗೌಡ, ಜಿಪಂ ಉಪಾಧ್ಯಕ್ಷ ಬಸವರಾಜು, ಸದಸ್ಯರುಗಳಾದ  ಮರಗದಮಣಿ, ತಾಪಂ ಅಧ್ಯಕ್ಷ,  ಮಲೈಮಹದೇಶ್ವರ ಬೆಟ್ಟದ ಪ್ರಾಧಿಕಾರದ ನಾಮನಿರ್ದೇಶಕ ಕೋಪ್ಪಳಿಮಹದೇವ್, ನಾಯಕ ಗ್ರಾಪಂ ಅಧ್ಯಕ್ಷ ರಂಗಶೆಟ್ಟಿಕೆಂಪಯ್ಯ, ಮಂಗಲ ಪುಟ್ಟರಾಜು, ಚಾಮುಲ್ ನಿರ್ದೇಶಕರುಗಳಾದ ನಂಜುಂಡಸ್ವಾಮಿ, ಮುಖಂಡರಾದ ಕೃಷ್ಣ ,ರವಿಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಾಗರಾಜು, ವಿಸ್ತಾರಣಾಧಿಕಾರಿ ಮಂಜುಳಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News