ಓ ಮೆಣಸೇ..

Update: 2017-08-27 18:44 GMT

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ -ಸಿ.ಎಂ.ಇಬ್ರಾಹೀಂ, ಮೇಲ್ಮನೆ ಕಾಂಗ್ರೆಸ್ ಅಭ್ಯರ್ಥಿ
ಬಾಂಡ್ ಪೇಪರ್‌ನಲ್ಲಿ ಹಾಗೆಂದು ಸಹಿ ಹಾಕಿದ ಬಳಿಕ ಸಿಕ್ಕಿದ ಹುದ್ದೆ ಇದು.

---------------------
ಯಡಿಯೂರಪ್ಪ ವಿರುದ್ಧ ಡಿನೋಟಿಫಿಕೇಶನ್ ಪ್ರಕರಣದ ಸಿಐಡಿ ತನಿಖೆಗೆ ಆದೇಶಿಸಿದ್ದು ಅಂದಿನ ಮುಖ್ಯಮಂತ್ರಿ ಸದಾನಂದಗೌಡ -ವಿ.ಎಸ್.ಉಗ್ರಪ್ಪ, ವಿ.ಪ.ಸದಸ್ಯ
 ಆಗ ಸದಾನಂದ ಗೌಡರು ಯಡಿಯೂರಪ್ಪರ ವಿರೋಧ ಪಕ್ಷದಲ್ಲಿದ್ದರು.
---------------------
  ನಮ್ಮ ಆದ್ಯತೆ ಶಾಂತಿ, ಯುದ್ಧವಲ್ಲ -ರಾಜನಾಥ್‌ಸಿಂಗ್, ಕೇಂದ್ರ ಸಚಿವ
  ಚೀನಾ ವಿಷಯದಲ್ಲಿ ಮಾತ್ರ, ಅಲ್ಲವೇ?
---------------------
  ರಾಜ್ಯ ರಾಜಕೀಯ ಸ್ಥಿತಿಯ ನಾಡಿಮಿಡಿತ ನನಗೆ ಚೆನ್ನಾಗಿ ಗೊತ್ತು - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
  ಯಾವುದಾದರೂ ಮಠದ ಅಂಗದಲ್ಲಿ ನಾಡಿ ಶಾಸ್ತ್ರ ನೋಡುತ್ತಾ ಉಳಿದ ಬದುಕನ್ನು ಕಳೆಯಬಾರದೇ?
---------------------
  ಮುಂದಿನ ದಿನಗಳಲ್ಲಿ ತಮಿಳುನಾಡಿನ ಅಭಿವೃದ್ಧಿಗೆ ಕೇಂದ್ರ ಸರಕಾರ ಎಲ್ಲ ಬೆಂಬಲವನ್ನು ನೀಡಲಿದೆ -ನರೇಂದ್ರ ಮೋದಿ, ಪ್ರಧಾನಿ
 ಬಹುಶಃ ಎಡಿಎಂಕೆ ನಿಮಗೆ ನೀಡುವ ಬೆಂಬಲ ಅವಲಂಬಿಸಿ ನಿಮ್ಮ ಬೆಂಬಲ.

---------------------
  ಸಿದ್ದರಾಮಯ್ಯ ಅವರದ್ದು ಹಗರಣ ರಹಿತ ಸರಕಾರ -ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
  ಮಕ್ಕಳು ಹೊಸ ಹಗರಣದಲ್ಲೇನಾದರೂ ಸಿಕ್ಕಿ ಹಾಕಿಕೊಂಡಿದ್ದಾರೆಯೇ?
---------------------
  ಗೋಮಾಂಸ ತಿನ್ನುವುದು ನಮ್ಮ ಹಕ್ಕು ಎನ್ನುವವರು ಮೊದಲು ಸಂವಿಧಾನ ಓದಬೇಕು -ವಜೂಭಾಯಿ ವಾಲಾ, ರಾಜ್ಯಪಾಲ
  ಯಾಕೆ, ಅದರಲ್ಲಿ ನಾವು ತಿನ್ನುವ ಆಹಾರದ ಮೆನು ವಿವರಗಳಿವೆಯೇ?
---------------------
  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಐಪಿ ಸಂಸ್ಕೃತಿಗೆ ಜಾಗವಿಲ್ಲ -ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಏನಿದ್ದರೂ, ಅತ್ಯಾಚಾರಿ ಸಂಸ್ಕೃತಿಗಷ್ಟೇ ಜಾಗ.

---------------------
  ಬಿಜೆಪಿಯವರು ‘ಇಂದಿರಾ ಕ್ಯಾಂಟೀನ್’ ಅಹಾರದಲ್ಲಿ ಏನಾದರೂ ಮಿಶ್ರಣ ಮಾಡಿ ಸರಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದರೂ ಆಶ್ಚರ್ಯವಿಲ್ಲ -ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
  ಅದಕ್ಕೆ ಮೊದಲೇ ನಿರೀಕ್ಷಣಾ ಜಾಮೀನು.
---------------------
  ಬಹುತೇಕ ಸಂದರ್ಭಗಳಲ್ಲಿ ನಮ್ಮ ಸಾಮರ್ಥ್ಯ ನಮಗೇ ತಿಳಿದಿರುವುದಿಲ್ಲ - ಬಾಬಾ ರಾಮ್‌ದೇವ್, ಯೋಗ ಗುರು
 ತಿಳಿದಿದ್ದರೆ ನೀವು ಜನರ ನಡುವೆ ಇರುತ್ತಲೂ ಇರಲಿಲ್ಲ.

---------------------
  ನಾನೀಗ ಆರೋಪ ಮುಕ್ತ , ಧೈರ್ಯದಿಂದ ಟಿಕೆಟ್ ಕೇಳ್ತೀನಿ -ಹರತಾಳು ಹಾಲಪ್ಪ, ಮಾಜಿ ಸಚಿವ
 ಹಾಳಪ್ಪ ಮತ್ತೆ ಹಾಲಪ್ಪ ಆಗುವುದು ಕಷ್ಟ.

---------------------
  ಜನರ ಬಳಿ ಹೋಗಿ ಅವರ ನೋವನ್ನು ಆಲಿಸುವುದೇ ನನ್ನ ಸದ್ಯದ ಗುರಿ - ಶಂಕರಸಿನ್ಹಾ ವೇಲಾ, ಗುಜರಾತ್ ಮಾಜಿ ಮುಖ್ಯಮಂತ್ರಿ
ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಾದ ನಿಮ್ಮ ನೋವನ್ನು ಆಲಿಸುವವರೇ ಇಲ್ಲವಲ್ಲ.

---------------------
  ಸಿ.ಎಂ.ಸಿದ್ದರಾಮಯ್ಯ ಎಷ್ಟು ಢೋಂಗಿ ಎಂಬುದು ನನಗೆ ಗೊತ್ತು - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
  ಎಷ್ಟಿದ್ದರೂ ನಿಮ್ಮ ತಂದೆಯ ಗರಡಿಯಲ್ಲಿ ಪಳಗಿದವರಲ್ಲವೇ?
---------------------
  ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
 ಅದು ಅಮೆರಿಕದ ಅನುದಾನದಿಂದ ಸೃಷ್ಟಿಯಾದ ಸ್ವರ್ಗ.

---------------------
  ಸಿದ್ದರಾಮಯ್ಯ ಮುಖ್ಯಮಂತ್ರಿಯಲ್ಲ ‘ಮುಕ್ಕುವ ಮಂತ್ರಿ’ -ನಳಿನ್ ಕುಮಾರ್ ಕಟೀಲು, ಸಂಸದ
 ಮಣ್ಣು ಮುಕ್ಕುವ ಭಯದಿಂದ ಬಿಜೆಪಿ ನಾಯಕರು ನೀಡುವ ಹೇಳಿಕೆಗಳು.

---------------------
ಸಚಿವ ಡಿ.ಕೆ.ಶಿವಕುಮಾರ್ ಮನೆಗೆ ಐಟಿ ದಾಳಿ ಮಾಡಿದಾಗ ಏನೂ ಸಿಕ್ಕಿಲ್ಲ -ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
  ದಾಳಿ ಮಾಡಿದವರ ಜೊತೆ ನೀವೂ ಮಾರುವೇಷದಲ್ಲಿ ಹೋಗಿದ್ದಿರೇ?
---------------------
  ನಾನು ಒಬ್ಬ ಅಪ್ಪಟ ಸಂಶೋಧಕ - ಡಾ.ಚಿದಾನಂದ ಮೂರ್ತಿ, ಸಂಶೋಧಕ
 ವಿದ್ವಾಂಸರಾಗಲು ಹೊರಟು ವಿಧ್ವಂಸ ಮಾಡಿದವರೆಂಬ ಹೆಗ್ಗಳಿಕೆ ನಿಮ್ಮದು.

---------------------
  ರಾಜ್ಯದ ಬದಲಾವಣೆಯ ಪರ್ವ ಕರಾವಳಿಯಿಂದಲೇ ಆರಂಭವಾಗಲಿ -ಪ್ರತಾಪ್ ಸಿಂಹ, ಸಂಸದ
ಬೆಂಕಿ ಹಚ್ಚಿ ಬದಲಾವಣೆ ಮಾಡಲು ಹೊರಟರೆ, ಆ ಬೆಂಕಿಗೆ ನೀವೇ ಬಲಿಯಾಗುತ್ತೀರಿ.

---------------------
ಸಿ ಫೋರ್ ಸಮೀಕ್ಷೆ ಕಾಂಗ್ರೆಸ್ ಪ್ರಾಯೋಜಿತ ನಾಟಕ ಮಂಡಳಿ -ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ
 ಸ್ವತಃ ಅಮಿತ್ ಶಾ ಅವರೇ ಸಮೀಕ್ಷೆ ನಡೆಸಿದಾಗ, ಬಿಜೆಪಿಯ ಸ್ಥಾನಗಳು ಇನ್ನಷ್ಟು ಕೆಳಮಟ್ಟಕ್ಕಿಳಿಯಿತಂತೆ.

---------------------
  ಖಾಸಗಿತನದ ಹಕ್ಕು ಮೂಲಭೂತ ಹಕ್ಕಾದರೂ ಅದು ಪರಿಪೂರ್ಣವಲ್ಲ -ಅರುಣ್ ಜೇಟ್ಲಿ, ಕೇಂದ್ರ ಸಚಿವ
 ಮೊದಲು ಸುಪ್ರೀಂಕೋರ್ಟ್‌ನ ನ್ಯಾಯ ನೀಡುವ ಹಕ್ಕು ಎಷ್ಟು ಪರಿಪೂರ್ಣ ಎನ್ನುವುದನ್ನು ಹೇಳಿ.

---------------------
  ಬಿಎಸ್‌ವೈ, ಶೆಟ್ಟರ್ ಲಿಂಗಾಯತರೇ ಅಲ್ಲ, ಮನುವಾದಿಗಳು - ಬಸವರಾಜ ರಾಯರೆಡ್ಡಿ, ಸಚಿವ
ಅವಕಾಶವಾದಿಗಳು ಎಂದರೆ ಚೆನ್ನ.

---------------------
  ದೇವರ ಮನಸ್ಸು ಮತ್ತು ಮಗುವಿನ ಮುಗ್ಧತೆ ಇದ್ದರೆ ಸಮಾಜದಲ್ಲಿ ಎಂದಿಗೂ ಸಂಘರ್ಷ ಉಂಟಾಗುವುದಿಲ್ಲ -ರಮಾನಾಥ ರೈ, ಸಚಿವ
ಹಾಗಾದರೆ ಹೆಬ್ಬೆಟ್ಟು ಚೀಪುತ್ತಾ, ಅಂಬೆಗಾಲಿಕ್ಕಿಕೊಂಡು ಪ್ರಭಾಕರ ಭಟ್ಟರ ಮುಂದೆ ಓಡಾಡಿ. ಕಲ್ಲಡ್ಕದಲ್ಲಿ ಶಾಂತಿ ನೆಲೆಸಲಿ 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...