ಮಾದಾರ ಚೆನ್ನಯ್ಯ ಶ್ರೀಗಳು ಕರ್ನಾಟಕದ ಆದಿತ್ಯನಾಥ್ ಆಗುತ್ತಾರೋ ?
Update: 2017-08-28 19:00 IST
ಬೆಂಗಳೂರು, ಆ.28: ಚಿತ್ರದುರ್ಗದ ಮಾದಾರ ಶಿವಶರಣ ಗುರುಪೀಠದ ಶ್ರೀ ಚೆನ್ನಯ್ಯ ಸಾಮೀಜಿ ಅವರನ್ನು ಚಿತ್ರದುರ್ಗ ಲೋಕಸಭಾ ಮೀಸಲು ಕ್ಷೇತ್ರದಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಮಾದಾರ ಚೆನ್ನಯ್ಯ ಶ್ರೀಗಳು ರಾಜಕೀಯ ರಂಗ ಪ್ರವೇಶಿಸಲು ಆಸಕ್ತಿ ವಹಿಸಿದ್ದಾರೆ. ಬಿಜೆಪಿ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಚೆನ್ನಯ್ಯ ಶ್ರೀಗಳು ಇಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿವಾಸದಲ್ಲಿ ಏರ್ಪಡಿಸಲಾಗಿದ್ದ ದಲಿತರ ಕಡೆಗೆ ಬಿಜೆಪಿ ನಡಿಗೆ ಕಾರ್ಯಕ್ರಮದಲ್ಲೂ ಚೆನ್ನಯ್ಯ ಶ್ರೀಗಳು ಭಾಗವಹಿಸಿ ದ್ದರು. ಶ್ರೀಗಳನ್ನು ಯಡಿಯೂರಪ್ಪ ಗೌರವಿಸಿದ್ದರು.