×
Ad

ಹನೂರು: ವೀರಪ್ಪನ್‍ ಸಹಚರ ಶಿವಸ್ವಾಮಿ ಬಂಧನ

Update: 2017-08-28 20:14 IST

ಹನೂರು, ಆ.28: ಹನೂರು ಪಟ್ಟಣದ ಗಣಿ ಉದ್ಯಮಿ ಸಂಪಗಿರಾಮಯ್ಯ ಎಂಬವರ ಪುತ್ರ ರಾಮಮೂರ್ತಿಯವರನ್ನು ಅಪರಿಸಿದ ಪ್ರಕರಣ ಸೇರಿದಂತೆ ಕರ್ನಾಟಕದ ಗಡಿ ಹಂಚಿನ ಗ್ರಾಮವಾದ ಪಾಲಾರ್‍ಗೆ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ಇನ್ನಿತರ ನಾಲ್ಕು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ವೀರಪ್ಪನ್‍ನ ಸಹಚರನನ್ನು ಬಂಧಿಸುವಳ್ಳಿ ರಾಮಾಪುರ ಪೋಲಿಸರು ಯಶಸ್ವಿಯಾಗಿದ್ದಾರೆ.

ಮಲೈಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಮೆರೆದು ನರಹಂತಕ ಪ್ರಾಣಿಹಂತಕ ಎಂಬ ಕುಖ್ಯಾತಿ ಪಡೆದಿದ್ದ ವೀರಪ್ಪನ್‍ನ ಸಹಚರ ತಮಿಳುನಾಡಿನ ವಾಸಾಡಿ ಗ್ರಾಮದ  ಶಿವಸ್ವಾಮಿ ಆಲಿಯಾಸ್ ಡಬ್ಬಲ್‍ಗುಂಡಿ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಈತ 1992ರಲ್ಲಿ ರಾಮಪುರ ಪೋಲಿಸ್ ಠಾಣೆಯಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ಐದು ಮಂದಿ ಪೋಲಿಸ್ ಸಿಬ್ಬಂದಿಗಳನ್ನು ಹತ್ಯ ಮಾಡಿದ್ದ ಪ್ರಕರಣ, ನೆಲ್ಲೂರು ಗ್ರಾಮದ ವಾಸಿ ಚೆನ್ನಗೌಂಡರ್ ಎಂಬುವವರ ಅಪಹರಿಸಿ ಕೂಲೆ ಮಾಡಿದ ಪ್ರಕರಣ. ಮಲೈಮಹದೇಶ್ವರ ಠಾಣೆಯಲ್ಲಿ ದಾಖಲಾಗಿದ್ದ ಪಾಲರ್ ಬಾಂಬ್ ಸ್ಫೋಟದ ಪ್ರಕರಣಗಳ ಆರೋಪಿಯಾಗಿದ್ದ ಎನ್ನಲಾಗಿದೆ.

ತಮಿಳುನಾಡು ರಾಜ್ಯದ ಸತ್ತಿಮಂಗಲದ ಬಳಿ ಡಿಜಿ ಪುದೂರು ಗ್ರಾಮದಲ್ಲಿ ಈತನನ್ನು ಚಾಮರಾಜನಗರ ಜಿಲ್ಲೆಯ ಆರಕ್ಷಕ ಅಧೀಕ್ಷಕ ಧರ್ಮಂದರ್‍ಕುಮಾರ್ ಮೀನಾರವರ ನಿರ್ದೇಶನದಂತೆ ಅಪರ ಆರಕ್ಷಕ ಅಧೀಕ್ಷಕ ಗೀತಾರವರು ಹಾಗೂ ಕೂಳ್ಳೇಗಾಲ ಉಪವಿಭಾಗ ಪೋಲಿಸ್ ಉಪಾಧೀಕ್ಷಕ ಪುಟ್ಟಮಾದಯ್ಯರವರ ಮಾರ್ಗದರ್ಶನದಲ್ಲಿ ರಾಮಾಪುರ ಠಾಣೆ ಪೋಲಿಸ್ ಠಾಣೆಯ ಆರಕ್ಷಕ ನಿರೀಕ್ಷಕ ಶಿವಸ್ವಾಮಿ ಹಾಗೂ ಠಾಣೆಯ ಸಿಬ್ಬಂದಿಗಳು ಬಂಧಿಸಿ ನ್ಯಾಯಲಕ್ಕೆ ಹಾಜರು ಪಡೆಸಿದ್ದಾರೆ.

ದಾಳಿಯಲ್ಲಿ ಪಿಎಸ್ ಐ ಶ್ರೀಧರ್ ಹಾಗೂ ಸಿಬ್ಬಂದಿಗಳಾದ ಶಂಕರ ರಮೇಶ್ ಅಣ್ಣಾದೂರೈ ಇನ್ನಿತರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News