×
Ad

ನಾಗಮಂಗಲ: ಬಾಲ್ಯ ವಿವಾಹಕ್ಕೆ ತಡೆ

Update: 2017-08-28 21:47 IST

ನಾಗಮಂಗಲ, ಆ.28: ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಸೋಮವಾರ ನಡೆಯುತ್ತಿದ್ದ ಅಪ್ರಾಪ್ತ ಯುವತಿಯ ವಿವಾಹವನ್ನು ಪಟ್ಟಣ ಠಾಣೆ ಎಎಸ್ಸೈ ಜಯಗೌರಿ ತಡೆದಿದ್ದಾರೆ.

ತಾಲೂಕಿನ ಬಸವೇಶ್ವರನಗರದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಪಾಂಡವಪುರ ತಾಲೂಕಿನ ತಂಗರಾಜು ಎಂಬುವನ ಜತೆ ಕ್ಷೇತ್ರದಲ್ಲಿ ಮದುವೆ ಮಾಡಲಾಗುತ್ತಿತ್ತು.

ಹುಡುಗಿ ಅಪ್ರಾಪ್ತೆ ಎಂಬ ವಿಷಯ ತಿಳಿದ  ಎಸ್ಸೈ  ಜಯಗೌರಿ ಸ್ಥಳಕ್ಕೆ ತೆರಳಿ ಮದುವೆಯನ್ನು ನಿಲ್ಲಿಸಿದರು. ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪ್ರಣತಿ, ಸಾಂತ್ವನ ಕೇಂದ್ರದ ಭಾಗ್ಯ ಅವರು ಬಾಲಕಿಯನ್ನು ವಶಕ್ಕೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News