×
Ad

ಮಹಿಳೆಯ ಸರ ಕಿತ್ತು ಪರಾರಿ

Update: 2017-08-28 22:26 IST

ಬಣಕಲ್, ಆ.28: ಕೊಟ್ಟಿಗೆಹಾರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಹಾಸನ ಜಿಲ್ಲೆ ಹೊಳೆನರಸಿಪುರದ ವೀಣಾ ಎಂಬವರ ಚಿನ್ನದ ಸರವನ್ನು ವ್ಯಕ್ತಿಯೊಬ್ಬ ಕಿತ್ತು ಪರಾರಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಹೊರನಾಡಿನಿಂದ ಹೊಳೆನರಸಿಪುರಕ್ಕೆ ಸಕಾರಿ ಬಸ್ ನಲ್ಲಿ ಬಂದಿದ್ದ ವೀಣಾರವರು ಕೊಟ್ಟಿಗೆಹಾರದ ಬಸ್‍ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದು, ನಿಲ್ದಾಣದ ಶೌಚಾಲಯಕ್ಕೆ ಹೋಗಿ ಹೊರ ಬರುವಾಗ ಮುಖಕ್ಕೆ ಮುಸುಕು ದರಿಸಿದ್ದ ವ್ಯಕ್ತಿಯೊಬ್ಬ ಅಚಾನಕ್ಕಾಗಿ ಬಂದು ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾನೆ.

ಈ ಬಗ್ಗೆ ವೀಣಾ ಬಣಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News