×
Ad

ಸೊರಬ : ಆ.31ರಂದು ಬೃಹತ್ ಉದ್ಯೋಗಮೇಳ

Update: 2017-08-28 23:02 IST

ಸೊರಬ,ಆ.28: ತಾಲೂಕಿನ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆ.31ರಂದು ಪಟ್ಟಣದ ರಂಗ ಮಂದಿರದಲ್ಲಿ ಬೃಹತ್ ಉದ್ಯೋಗಮೇಳ ಹಮ್ಮಿಕೊಳ್ಳಾಗಿದೆ ಎಂದು ಉದ್ಯೋದಾತ ಸಂಸ್ಥೆ ಅಧ್ಯಕ್ಷ ರುಕ್ಷ್ಮಾಂಗದ ಹೇಳಿದರು.

ಉದ್ಯಮಿ ರಾಜು ಎಂ ತಲ್ಲೂರು ಅವರ ದೂರದೃಷ್ಟಿ ಚಿಂತನೆಯಿಂದ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದ ಸುಮಾರು 80ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, 4000ಕ್ಕೂ ಅಧಿಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಸೋಮವಾರ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿದ್ಯಾರ್ಹತೆಗೆ ಅನುಗುಣವಾಗಿ ಕೆಲಸ ನೀಡಲಿದ್ದು, ಕನಿಷ್ಠ ರೂ 8000 ರಿಂದ ಗರಿಷ್ಠ ರೂ 30,000 ವರೆಗೆ ವೇತನ ನೀಡುವ ಬಗ್ಗೆ ಕಂಪನಿಗಳು ಒಪ್ಪಿಕೊಂಡಿವೆ.  ಉದ್ಯೋಗಮೇಳದಲ್ಲಿ ಭಾಗವಹಿಸಿ ಸಂದರ್ಶನದಲ್ಲಿ ಉತ್ತೀರ್ಣರಾಗದ ಯುವಕರಿಗೂ  ಪ್ರತ್ಯೇಕ ತರಬೇತಿ ನೀಡಿ ಉದ್ಯೋಗ ನೀಡಲಾಗುವುದು ಎಂದರು.

ತಾಲೂಕಿನ ವಿದ್ಯಾವಂತ ಯುವಕ ಹಾಗೂ ಯುವತಿಯರು ತಮ್ಮ ದಾಖಲೆಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮೋದ್, ಕುಮಾರ್ ಉಪ್ಪಾರ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News