ಕನ್ನಡ ಪುಸ್ತಕ ಓದುದ ಮೂಲಕ ಕನ್ನಡ ಭಾಷೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು: ವಿನಯಕುಮಾರ್
ಬಣಕಲ್, ಆ.28: ಕನ್ನಡ ಭಾಷೆಯು ಅಭಿವೃದ್ಧಿಯಾಗಬೇಕಾದರೆ ಕನ್ನಡ ಸಾಹಿತ್ಯಕ್ಕೆ ನಾವು ಪ್ರೋತ್ಸಾಹ ಕೊಡಬೇಕಿದೆ. ಕನ್ನಡ ಪುಸ್ತಕಗಳನ್ನು ಓದುವ ಮೂಲಕ ಕನ್ನಡ ಭಾಷೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಕಿರುತೆರೆಯ ನಿರ್ದೇಶಕ ವಿನಯಕುಮಾರ್ ಹೇಳಿದರು.
ಅವರು ಬಣಕಲ್ ಸಮೀಪದ ಬಗ್ಗಸಗೋಡು ಗ್ರಾಮದಲ್ಲಿ ಮೂಡಿಗೆರೆ ಕಸಾಪ ಹಾಗೂ ಬಣಕಲ್ ಕಸಾಪದ ಆಶ್ರಯದಲ್ಲಿ ನಡೆದ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ನೀತಿ ಕೊಡುವ ಕನ್ನಡ ಚಲನಚಿತ್ರಗಳು ಮತ್ತು ಉತ್ತಮ ಗುಣಮಟ್ಟದ ಕನ್ನಡ ದಾರಾವಾಹಿಗಳು ನೋಡಬೇಕು. ದಾರಾವಾಹಿಗಳಲ್ಲಿ ಬರುವ ಒಳ್ಳೆಯ ಅಂಶವನ್ನು ನಾವು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿ ಅದರಲ್ಲಿಯ ಕೆಡುಕುಗಳನ್ನು ನಾವು ಅದರ್ಶತೆಗೆ ತೆಗೆದುಕೊಳ್ಳಬಾರದು. ಕನ್ನಡ ಸ್ವಚ್ಚಂಧ ಭಾಷೆಯಾಗಿದ್ದು ಅದರ ಉಳಿಯುವಿಕೆಗಾಗಿ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದರು.
ಮೂಡಿಗೆರೆ ಕಸಾಪದ ತಾಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಹಬ್ಬದ ನಡುವೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗ್ರಾಮಸ್ಥರು ಉತ್ಸಾಹದಲ್ಲಿ ಪಾಲ್ಗೊಳ್ಳಬೇಕು. ಕನ್ನಡ ಸಾಹಿತ್ಯದ ಜಾನಪದ ಹಾಡುಗಳು ಮರೆಯಾಗುತ್ತಿರುವ ಹಿನ್ನಲೆಯಲ್ಲಿ ಜನರಿಗೆ ಇದರ ಅರಿವು ಮೂಡಿಸುವ ಕಾರ್ಯಕ್ರಮ ನಾವು ನಡೆಸಿ ಕೋಲಾಟ, ಗೀಗೀ ಪದಗಳು, ಜಾನಪದ ಹಾಡುಗಳು ಮರೆಯಾಗದಂತೆ ಮಾಡುವ ಉದ್ದೇಶ ಈ ಸಾಹಿತ್ಯ ಪರಿಷತ್‍ನಿಂದ ಮಾಡಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.
ಯುರೇಕಾ ಅಕಾಡೆಮಿಯ ಅಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ, ಕನ್ನಡ ಭಾಷೆ ಉಳಿಸುವ ದೃಷ್ಟಿಯಿಂದ ಕನ್ನಡದ ವಿವಿಧ ಜಾನಪದ ಪ್ರಾಕಾರಗಳನ್ನು ಈಗಿನ ಪೀಳಿಗೆಗೆ ಕಲಿಸಿ ಮುಂದಿನ ಪೀಳಿಗೆಗೂ ಕಲಿಸುವ ಅವಶ್ಯಕತೆಯಿದೆ.ಆಧುನಿಕತೆಯ ಭರಾಟೆಯಲ್ಲಿ ಮೊಬೈಲ್ ಲೋಕ ಬಂದು ಹಳ್ಳಿಗಳಲ್ಲಿ ನಡೆಯುತ್ತಿದ್ದ ಜಾನಪದ ಹಾಡುಗಳು ಮರೆಯಾಗುತ್ತಿದ್ದು ಅವುಗಳನ್ನು ಉಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಈ ವೇಳೆ ಗ್ರಾಮದ ಮಕ್ಕಳು ವಿವಿಧ ಮನೋರಂಜನೆಯ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬಣಕಲ್ ಕಸಾಪದ ಅಧ್ಯಕ್ಷ ಮೋಹನ್ ಕುಮಾರ್‍ಶೆಟ್ಟಿ ಮಾತನಾಡಿದರು. ಕಸಾಪದ ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ಅಶೋಕ್, ತಾಲೂಕು ಕಸಾಪದ ಕಾರ್ಯಧರ್ಶಿ ಡಿ.ಕೆ.ಲಕ್ಷ್ಮಣ್‍ಗೌಡ, ವಸಂತ್, ಸದಸ್ಯರಾದ ಎ.ಸಿ.ಅಯೂಬ್, ಫಲ್ಗುಣಿ ಗ್ರಾಪಂ ಅಧ್ಯಕ್ಷೆ ದೇವಕಿ, ಉಪಾಧ್ಯಕ್ಷ್ಯೆ ರತ್ನಮ್ಮ, ಫಲ್ಗುಣಿ ಗ್ರಾಮದ ಮುಖಂಡ ಚೆನ್ನಯ್ಯ, ಶಿಕ್ಷಕರಾದ ನಾಗರಾಜ್, ಶೇಖರಪ್ಪ ಮತ್ತಿತರರಿದ್ದರು.