×
Ad

ಸೊರಬ : ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ

Update: 2017-08-28 23:21 IST

ಸೊರಬ,ಆ.28 : ಮನುಷ್ಯ ಧಾರ್ಮಿಕ ಚಿಂತನೆಯೊಂದಿಗೆ ಶಿಕ್ಷಣ ಪಡೆದಾಗ ನೈತಿಕ ಮೌಲ್ಯಗಳನ್ನು ಉಳಿಸಲು ಸಾಧ್ಯ ಎಂದು ಹಾವೇರಿ ಜಿಲ್ಲಾ ಜಮಾತೆ-ಇಸ್ಲಾಮಿ ಹಿಂದ್‍ನ ಸಂಚಾಲಕ ಮುಖ್ತಾರ್ ಅಹ್ಮದ್ ಕೊತ್ವಾಲ್ ತಿಳಿಸಿದರು. 

ಪಟ್ಟಣದ ದಾರುಸ್ಸಲಾಂ ಶಾದಿ ಮಹಲ್‍ನಲ್ಲಿ ಆಯೋಜಿಸಿದ್ದ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್‍ನಿಂದ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಮಕ್ಕಳ ಶೈಕ್ಷಣಿಕ ಉನ್ನತಿಯಲ್ಲಿ ಪೋಷಕರ ಜವಾಬ್ದಾರಿ ಹೆಚ್ಚಿನದ್ದಾಗಿದೆ. ವ್ಯಕ್ತಿಯ ಪರಿಚಯ ಶಿಕ್ಷಣದಿಂದ ಮಾತ್ರ ಸಾಧ್ಯ. ಆರೋಗ್ಯಪೂರ್ಣ ಸಮಾಜದ ನಿರ್ಮಾಣದಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ನೈತಿಕ ಶಿಕ್ಷಣದ ಕೊರತೆಯಿಂದಾಗಿ ಇಂದು ಅನೇಕ ಅವಘಡಗಳು ಸಂಭವಿಸುತ್ತಿವೆ. ಸುಶಿಕ್ಷಿತರಿಂದಲೆ ಪರಿಸರ ನಾಶವಾಗುತ್ತಿದೆ. ಸಮಾಜವನ್ನು ಒಗ್ಗೂಡಿಸುವ ಶಿಕ್ಷಣದ ಅವಶ್ಯಕತೆ ಬಹಳಷ್ಟಿದೆ ಮನುಷ್ಯರು ಪರಸ್ಪರ ಪ್ರೀತಿ ವಿಶ್ವಾಸದಿಂದ ಅನ್ಯೋನ್ಯತೆಯಿಂದ ಬದುಕುವಂತಹ ಶಿಕ್ಷಣ ನೀಡುವಲ್ಲಿ ಪೋಷಕರು ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಜಮಾತೆ-ಇಸ್ಲಾಮಿ ಹಿಂದ್ ಸ್ಥಾನೀಯ ಘಟಕದ ಅಧ್ಯಕ್ಷ ಎಂ.ಬಶೀರ್ ಅಹಮದ್ ವಹಿಸಿದ್ದರು. ಪತ್ರಕರ್ತ ಮುಹಮ್ಮದ್ ಆರೀಫ್ ಮಾತನಾಡಿದರು. ಎಂ.ವಝೀರ್ ಅಹಮದ್, ಅಮ್ಜದ್ ಪಾಶಾ, ಮುಹಮ್ಮದ್ ಯಾಸೀನ್, ಮೌಲಾನಾ ಅಲಿ ಹಸನ್, ಮುಹಮ್ಮದ್ ಇನಾಯತ್ ವುಲ್ಲಾ, ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News