ಮಕ್ಕಾದತ್ತ ಜನಸಾಗರ...
Update: 2017-08-28 23:41 IST
ಹಜ್ ಯಾತ್ರೆಗಾಗಿ ಜಗತ್ತಿನಾದ್ಯಂತದ ಸುಮಾರು 20 ಲಕ್ಷ ಮುಸ್ಲಿಮರು ಮಕ್ಕಾದತ್ತ ಆಗಮಿಸುತ್ತಿದ್ದಾರೆ. ಈ ಬಾರಿ ಇರಾನ್‌ನ ಶಿಯಾ ಮುಸ್ಲಿಮರೂ ಧಾರ್ಮಿಕ ವಿಧಿವಿಧಾನಗಳಿಗಾಗಿ ಮಕ್ಕಾಗೆ ಆಗಮಿಸುತ್ತಿದ್ದಾರೆ. ಅದೇ ವೇಳೆ, ಸೌದಿ ಅರೇಬಿಯ, ಬಹರೈನ್, ಯುಎಇ ಮತ್ತು ಈಜಿಪ್ಟ್‌ಗಳು ಕತರ್‌ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡ ಹಿನ್ನೆಲೆಯಲ್ಲಿ ಉಂಟಾಗಿರುವ ಕೊಲ್ಲಿ ಬಿಕ್ಕಟ್ಟಿನ ಬಳಿಕ ಮೊದಲ ಹಜ್ ಯಾತ್ರೆ ನಡೆಯುತ್ತಿದೆ.