ಸುಂಟಿಕೊಪ್ಪ: ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಣಾ ಕಾರ್ಯಕ್ರಮ
Update: 2017-08-28 23:58 IST
ಸುಂಟಿಕೊಪ್ಪ,ಆ.28: ಕೆದಕಲ್ ಗ್ರಾಮ ಪಂಚಾಯತ್ ವತಿಯಿಂದ ಉಜ್ವಲ ಯೋಜನೆಯಡಿ ಬಿಪಿಎಲ್ ಪಡಿತರ ದಾರರಾದ 20 ಬಡ ಕುಟುಂಬಗಳಿಗೆ ಅಡುಗೆ ಅನಿಲವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಬಿ ಎ. ಬಾಲಕೃಷ್ಣ ವಿತರಿಸಿದರು.
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ ಎ. ಬಾಲಕೃಷ್ಣ ಮಾತನಾಡಿ, ಕೆದಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಡುಗೆ ಅನಿಲದ ಸಂಪರ್ಕ ಹೊಂದಿಕೊಳ್ಳದೇ ಇರುವ 20 ಬಡ ಕುಟುಂಬಗಳಿಗೆ ಅಡುಗೆ ಅನಿಲವನ್ನು ಪಂಚಾಯತ್ ವತಿಯಿಂದ ವಿತರಿಸಿದ್ದು, ಮುಂದಿನ ದಿನಗಳಲ್ಲಿ ಬಡ ಕುಟುಂಬಗಳನ್ನು ಗುರುತಿಸಿ ಅಡುಗೆ ಅನಿಲವನ್ನು ವಿತರಿಸುವ ಮೂಲಕ ಇಡೀ ಗ್ರಾಮವನ್ನು ಹೊಗೆ ರಹಿತ ಗ್ರಾಮವನ್ನಾಗಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆದಕಲ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಎ. ಕರುಂಬಯ್ಯ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೀಣಾ. ಸದಸ್ಯರಾದ ರಮೇಶ. ದೇವಿಪ್ರಸಾದ ಕಾಯರ್‍ಮಾರ್ ಮತ್ತಿತರರಿದ್ದರು.