×
Ad

ಸಾಧನೆಗೆ ಪರಿಶ್ರಮ, ಆಸಕ್ತಿ ಅತೀ ಮುಖ್ಯ: ಸಚಿನ್ ದೀಕ್ಷತ್

Update: 2017-08-29 17:43 IST

ಹನೂರು, ಆ.29: ಹನೂರು ತಾಲೂಕಿನ ಗ್ರಾಮೀಣ  ಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟುಗಳಿದ್ದಾರೆ ಅವರನ್ನು ಪ್ರೋತ್ಸಾಹಿಸಿ ಅವರಿಗೆ ಉತ್ತಮ ತರಬೇತಿ ನೀಡದರೆ ಅವರು ರಾಜ್ಯ ಹಾಗೂ ರಾಷ್ಟ ಮಟ್ಟದಲ್ಲಿ ಸಾಧನೆ ಮಾಡಬಲ್ಲರು ಎಂದು ರಾಜೇಂದ್ರ ಕುಮಾರ್ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಸಚಿನ್ ದೀಕ್ಷತ್ ಎಂದು ತಿಳಿಸಿದರು.

ತಾಲೂಕಿನ ಯರಬಾಂಡಿ ಗ್ರಾಮದ ಕಮ್ಯುನಿಟಿ ಹಾಲ್‍ನಲ್ಲಿ ಗ್ರಾಮೀಣ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸಾಧನೆಗೆ ಪರಿಶ್ರಮ, ಆಸಕ್ತಿ  ಅತೀ ಮುಖ್ಯ.  ಹಾಗಯೇ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು ಅಷ್ಟೇ ಮುಖ್ಯ ರಾಜೇಂದ್ರ ಪೌಂಡೇಷನ್ ವತಿಯಿಂದ ಯುವಕರಿಗೆ ಗ್ರಾಮೀಣ ಭಾಗದ ಕ್ರೀಡೆಗಳಿಗೆ ಹೆಚ್ಚನ ಆದ್ಯತೆ ನೀಡಿ ಅವರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.

ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳಲ್ಲಿ  ಪೆದ್ದನ್‍ ಪಾಳ್ಯ ಗ್ರಾಮದ ಸುವರ್ಣಸ್ಟಾರ್ ಎ ತಂಡ ಪ್ರಥಮ ಸ್ಥಾನ ಪಡೆದರೆ. ಪೆದ್ದನ್ ಪಾಳ್ಯ ಗ್ರಾಮದ ಸುವರ್ಣಸ್ಟಾರ್ ಬಿ  ತಂಡ ದ್ವಿತೀಯ ಸ್ಥಾನ ಪಡೆಯಿತು.

ಈ ವೇಳೆ  ಯರಂಬಾಡಿ ಗ್ರಾಮದ ಸಂಗೋಳ್ಳಿರಾಯಣ್ಣ ಯುವಕರ ಸಂಘವನ್ನು ವಕೀಲೆ ರುದ್ರಾ ಆರಾಧ್ಯರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರಾಜೇಂದ್ರಕುಮಾರ್ ಪೌಂಡೇಶನ್‍ನ ಜಿಲ್ಲಾ ಉಪಾದ್ಯಕ್ಷರಾದ ಸಂಜು ಕ್ರಾಂತಿ, ವೀರ ಸಂಗೋಳ್ಳಿರಾಯಣಣ್ಣ ಯುವಕರ ಸಂಘದ ಅಧ್ಯ ಕ್ಷ ಮುರುಗೇಶ್,  ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಕಾಮರಾಜು, ಕನಕ ಯುವಕ ಸಂಘದ ಅಧ್ಯಕ್ಷ ರಾಮರಾಜ್,  ಯರಂಬಾಡಿ ಕನಕ ಯುವಕ ಸಂಘದ ಅಧ್ಯಕ್ಷ ವಸಂತಕುಮಾರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News