×
Ad

ಹಾಸನ: ರುಂಡ ಕತ್ತರಿಸಿ ಯುವಕನ ಕೊಲೆ

Update: 2017-08-29 18:15 IST

ಹಾಸನ, ಆ.29: ದುಷ್ಕರ್ಮಿಗಳು ಯುವಕನೋರ್ವನನ್ನು ಮಚ್ಚಿನಿಂದ ಬರ್ಬರವಾಗಿ ಕಬ್ಬಿನ ಗದ್ದೆಯಲ್ಲಿ ಕೊಲೆ ಮಾಡಿ ರುಂಡವನ್ನು ಬೇರೆ ಕಡೆಗೆ ಕೊಂಡೂ ಯ್ದು, ದೇಹವನ್ನು ಮಾತ್ರ ಅಲ್ಲೇ ಬಿಟ್ಟು ಹೋಗಿರುವ ಘಟನೆ ಚನ್ನರಾಯಪಟ್ಟಣ ಸಮೀಪ ಎ. ಕಾಳೇನಹಳ್ಳಿಯಲ್ಲಿ ನಡೆದಿದೆ.

ನವೀನ್ (27) ಎಂಬವರು ದುಷ್ಕರ್ಮಿಗಳಿಂದ ಹತ್ಯೆಯಾದ ಯುವಕನೆಂದು ತಿಳಿದು ಬಂದಿದೆ. 

ರಾಜಕೀಯ ವೈಷಮ್ಯದಿಂದ ನವೀನ್ ನವರನ್ನು ಕೊಲೆ ಮಾಡಿದ್ದಾರೆಂದು ಅನುಮಾನಿಸಲಾಗಿದೆ. ಮೃತ ದೇಹವನ್ನು ನಗರದ ಜಿಲ್ಲಾ ಆಸ್ಪತ್ರೆಯ ಮರಣೋತ್ತರ ಪರೀಕ್ಷೆ ಒಳಪಡಿಸಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗಾಗಿ ತಂಡ ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News