ಅಕ್ರಮ ಜಲ್ಲಿ ಕಲ್ಲು ಸಾಗಟ: ಎರಡು ಲಾರಿ ವಶ
Update: 2017-08-29 22:49 IST
ಕುಶಾಲನಗರ, ಆ.29: ಅಕ್ರಮ ಜಲ್ಲಿ ಕಲ್ಲು ಮತ್ತು ಕಲ್ಲಿನ ಪುಡಿ ಸಾಗಿಸುತ್ತಿದ್ದ 2 ಟಿಪ್ಪರ್ ಗಳನ್ನು ಭೂ ವಿಜ್ಞಾನ ಅಧಿಕಾರಿಗಳ ತಂಡ ವಶಕ್ಕೆ ಪಡೆದ ಘಟನೆ ಕುಶಾಲನಗರ ಸಮೀಪದ ಅವರ್ತಿಗ್ರಾಮದಲ್ಲಿ ನಡೆದಿದೆ.
ಸಮೀಪದ ಆವರ್ತಿ ಗ್ರಾಮದಲ್ಲಿ ಅನಧಿಕೃತವಾಗಿ 2 ಟಿಪ್ಪರ್ ನಲ್ಲಿ 40 ಟನ್ ಜಲ್ಲಿಕಲ್ಲು, ಮತ್ತೊಂದು ಟಿಪ್ಪರ್ ಲಾರಿಯಲ್ಲಿ 20 ಟನ್ ಕಲ್ಲಿನ ಪುಡಿಯನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಈ ಟಿಪ್ಪರ್ ಕುಶಾಲನಗರದ ಗುತ್ತಿಗೆದಾರ ದಿನೇಶ್ ಎಂಬವರಿಗೆ ಸೇರಿದ್ದಾಗಿದೆ. ಟಿಪ್ಪರ್ ಚಾಲಕರನ್ನು ಮಂಗಳೂರಿನ ಪುನಿತ್ ಕುಮಾರ್ , ಕೂಡಿಗೆಯ ಸುರೇಶ್, ಗುಮ್ಮನಕೊಲ್ಲಿಯ ರಫೀಕ್ ಎಂದು ಗುರುತಿಸಲಾಗಿದೆ.
ಭೂ ವಿಜ್ಞಾನ ಅಧಿಕಾರಿ ಪುಷ್ಪರವರು ಬೈಲು ಕುಪ್ಪಪೊಲೀಸ್ ಠಾಣಾಗೆ ಒಪ್ಪಿಸಿ ಕ್ರಮ ತೆಗೆದುಕೊಂಡಿದ್ದಾರೆ.