ಬಣಕಲ್: ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಶಾಲೆಗೆ ಪ್ರಶಸ್ತಿ
ಬಣಕಲ್, ಆ.29: ಪ್ರೌಢಶಾಲೆಗಳ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬಣಕಲ್ ವಿದ್ಯಾಭಾರತಿ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಗೆದ್ದು ಶಾಲೆಗೆ ಹೆಸರು ತಂದುಕೊಟ್ಟಿದ್ದಾರೆ ಎಂದು ಎಂದು ವಿದ್ಯಾಭಾರತಿ ಪ್ರೌಢಶಾಲಾ ಮುಖ್ಯೋಪಾದ್ಯಾಯಿನಿ ಟಿ.ಆರ್.ಮಾಲತಿ ಮತ್ತು ಶಾಲೆಯ ನಿರ್ದೇಶಕ ಮೋಹನ್‍ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಅವರು ಈ ಕುರಿತು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕನ್ನಡ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಎಂ.ಪಿ.ಶ್ರಾವ್ಯ-1, ಹಿಂದಿ ಭಾಷಣ ಸ್ಫರ್ಧೆಯಲ್ಲಿ ಬಿ.ಎಲ್.ವಿಶಾಲ್-1, ರಂಗೋಲಿ ಸ್ಪರ್ಧೆಯಲ್ಲಿ ಎಂ.ಎಸ್.ಸೌಂದರ್ಯ-1, ಛದ್ಮವೇಷ ಸ್ಪರ್ಧೆಯಲ್ಲಿ ಬಿ.ಎಸ್.ವರ್ಷ-1, ಕೊಂಕಣಿ ಭಾಷಣ ಸ್ಪರ್ಧೆಯಲ್ಲಿ ರೇಚಲ್‍ಡಿಸೋಜ-1, ಧಾರ್ಮಿಕ ಪಠಣ ಸಂಸ್ಕೃತ ಸ್ಪರ್ಧೆಯಲ್ಲಿ ಜಿ.ಎಸ್.ಶ್ರೀನಿಧಿ-1, ಮಿಮಿಕ್ರಿಯಲ್ಲಿ ಡಿ.ಕೆ.ಶಿವಪ್ರಸಾದ್-1, ಭಾವಗೀತೆಯಲ್ಲಿ ಬಿ.ಆರ್.ಸುಮಂತ್-1, ನಾಟಕದಲ್ಲಿ ಸಂಕೇತ್, ವಿಶಾಲ್, ಶೃಂಗ, ಅಪೇಕ್ಷ, ಪ್ರಾರ್ಥನ, ಮಹಮ್ಮದ್ ಮುಜಾಮಿಲ್, ಸಾಂಕೆತ್ ಪ್ರಸಾದ್, ರೂಪೇಶ್, ಆದರ್ಶ್ ಪ್ರಥಮ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ ಎಂದರು.
ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ಎಚ್.ಟಿ.ಸುಜನ್-2, ಭರತನಾಟ್ಯ ಸ್ಪರ್ಧೆಯಲ್ಲಿ ಬಿ.ಶಾರ್ವರಿ ಮತ್ತು ಸಿಂಚನ-2, ತೆಲುಗು ಭಾಷಣ ಸ್ಪರ್ಧೆ ಭುವನ್-2, ಚರ್ಚಾ ಸ್ಪರ್ಧೆಯಲ್ಲಿ ಎಂ.ಪಿ.ಶ್ರಾವ್ಯ-2, ಅರೇಭಿಕ್ ಧಾರ್ಮಿಕ ಫಠಣ ಸ್ಪರ್ಧೆಯಲ್ಲಿ ಮಹಮ್ಮದ್ ಮುಜಾಮಿಲ್-2, ಜಾನಪದ ನೃತ್ಯದಲ್ಲಿ ಶ್ರಾವ್ಯ, ಚಂದನ, ಪೂರ್ವಿಕ್, ಕಾವ್ಯ, ಅಂಕಿತ, ಗಾನವಿ, ಶೃಂಗಾ, ಸಿಂಚನ, ಸುಮಂತ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೆ, ಜಾನಪದ ಗೀತೆಯಲ್ಲಿ ಸುಮಂತ್ ತೃತೀಯ ಸ್ಥಾನ ಪಡೆದರೆ ಜಾಫರ್ ಸಾದೀಕ್ ಗಝಲ್‍ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಶಿಕ್ಷಕರಾದ ವಸಂತ್, ಲೀಲಾಮಣಿ, ಇಂದಿರಾ, ಗೀತ, ರುದ್ರಯ್ಯ, ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.