×
Ad

94ಸಿಸಿಗೆ ಒಳಪಡದ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ: ಶಾಸಕ ಡಾ.ರಫೀಕ್ ಅಹ್ಮದ್

Update: 2017-08-29 23:14 IST

ತುಮಕೂರು, ಆ.29: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕಂದಾಯ ಇಲಾಖೆಯ ಭೂ ಸ್ಮಧಾರಣಾ ಕಾಯ್ದೆ 94 ಸಿಸಿಗೆ ಒಳಪಡದ ಕುಟುಂಬಗಳನ್ನು ಸಮೀಕ್ಷೆ ನಡೆಸಿ ಅವರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದ್ದಾರೆ.

ಮಂಗಳವಾರ ತಮ್ಮ ಕಚೇರಿಯಲ್ಲಿ ಕೊಳಗೇರಿ ಹಿತರಕ್ಷಣಾ ಸಮಿತಿಯ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, 94ಸಿಸಿಯಲ್ಲಿ ಒಳಪಡದ ಕೊಳಗೇರಿ ನಿವಾಸಿಗಳ ಪಟ್ಟಿಯನ್ನು ಈಗಾಗಲೇ ತುಮಕೂರು ಜಿಲ್ಲಾ ಕೊಳಗೇರಿ ಹಿತರಕ್ಷಣಾ ಸಮಿತಿ ಸಲ್ಲಿಸಿದ್ದು ನಗರ ಆಶ್ರಯ ಸಮಿತಿ ಸದಸ್ಯರ ಆಯ್ಕೆಯಾದ ನಂತರ ಸಭೆ ಕರೆದು ಅನುಮೋಧನೆ ನೀಡುವುದಾಗಿ ಸಮಿತಿಗೆ ಭರವಸೆ ನೀಡಿದರು.

ವಾರ್ಟ್ ನಂ.1 ರ ಎಸ್‍ಎನ್ ಪಾಳ್ಯದ 69 ಕುಟುಂಬಗಳು 22ನೇ ವಾರ್ಡಿನ ಭಾರತಿ ನಗರದ 26 ಕುಟುಂಬಗಳು, ವಾರ್ಡ್ ನಂ. 33 ರ ಗುಂಡ್ಲಮ್ಮನ ನಗರದ 23 ಕುಟುಂಬಗಳು, ವಾರ್ಡ್ ನಂ.34ರ ಎಳ್ಳರ ಬಂಡೆಯ 10 ಕುಟುಂಬಗಳು, ವಾರ್ಡ್ ಸಂಖ್ಯೆ 3 ರ 14 ಕುಟುಂಬಗಳು 94ಸಿಸಿ ವ್ಯಾಪ್ತಿಗೆ ಒಳಪಡೆದೆ ಗ್ರಾಮಠಾಣ, ಖರಾಬ್ ಮತ್ತು ಐಡಿಎಸ್‍ಎಂಟಿ ಸ್ವಾಧೀನವಾಗಿ ಉಳಿದ ಭಾಗಗಳಲ್ಲಿರುವ ಹಾಲಿ ವಾಸವಿರುವ ಕುಟುಂಬಗಳಿಗೆ ಸಮೀಕ್ಷೆ ನಡೆಸಿ ಹಕ್ಕುಪತ್ರ ನೀಡಲು ಹಾಗೂ ಈಗಾಗಲೇ 2016ರಲ್ಲಿ ವಿವಿಧ ಕೊಳಚೆ ಪ್ರದೇಶಗಳಲ್ಲಿ ದಾಖಲೆಗಳಿಲ್ಲದೇ ವಾಸವಿರುವ ನಿವಾಸಿಗಳ ಸಮೀಕ್ಷೆ ನಡೆಸಿ ಸರಳಖಾತೆ ಮಾಡುವ ಬಗ್ಗೆ ನಗರ ಪಾಲಿಕೆ ಮಂದಾಗಿದೆ ಎಂದರು.

ಶಿರಾಗೇಟ್ ಐಡಿಎಸ್‍ಎಂಟಿ ಯೋಜನೆಯಲ್ಲಿ ಸ್ವಾದೀನವಾದ ಭೂಮಿಯಲ್ಲಿ ಈ ಹಿಂದಿನಿಂದಲೂ ವಾಸ ಮಾಡುತ್ತಿರುವ ಕುಟುಂಬಗಳ ಸಮೀಕ್ಷೆ ಮಾಡಿ ಸರಕಾರಿ ನಿಯಮಗಳಂತೆ ದಂಡ ಪಾವತಿಸಿಕೊಂಡು ಸಕ್ರಮ ಮಾಡಿಕೊಡಲು ಆಯುಕ್ತರಿಗೆ ಸೂಚಿಸಿದರು.

ಕೊಳಗೇರಿ ಜನರಿಗೆ ಈಗಾಗಲೇ 94ಸಿಸಿಯಲ್ಲಿ ಹಕ್ಕುಪತ್ರ ನೀಡುತ್ತಿದ್ದು, 94ಸಿಸಿ ವ್ಯಾಪ್ತಿಗೆ ಒಳಪಡದ ಕುಟುಂಬಗಳನ್ನು ಆಶ್ರಯ ಸಮಿತಿಯಲ್ಲಿ ಸಕ್ರಮಗೊಳಿಸಿ ಕನಿಷ್ಠ ಬಿ ಖಾತೆ ಮಾಡಿಕೊಟ್ಟು ವಸತಿ ಯೋಜನೆಗಳನ್ನು ಕೊಳಗೇರಿ ಜನರಿಗೆ ದೊರಕುವಂತೆ ಮಾಡಲಾಗುವುದು. ಆದ್ಯತೆ ಮೇಲೆ ಕೈಗೊಳ್ಳುವಂತೆ ಕ್ರಮ ಕೈಗೊಳ್ಳುವಂತೆ ಶಾಸಕರು ಆಯುಕ್ತರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಶೆಟ್ಟಾಳಯ್ಯ, ಅರುಣ್, ಶಾರದಮ್ಮ,ಸರ್ವರ್, ಸಿದ್ದರಾಜು, ಚಾಂದ್‍ಪಾಷಾ, ಶಂಕ್ರಯ್ಯ, ಹಯತ್‍ ಸಾಬ್, ಕುಮಾರ್‍ ಮಾದರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News