ಮಹಾಮಳೆಗೆ ಮುಂಬೈ ತತ್ತರ..!
Update: 2017-08-29 23:54 IST
ಮಹಾರಾಷ್ಟ್ರದ ಮುಂಬೈ, ಥಾಣೆ, ಪಾಲ್ಘರ್, ರಾಯಗಡ ಹಾಗೂ ಇತರ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆ ನಾಲ್ಕನೆ ದಿನವಾದ ಮಂಗಳವಾರ ಕೂಡ ಮುಂದುವರಿದಿದೆ. ನಗರದ ಬಹುಭಾಗ ಜಲಾವೃತವಾಗಿದ್ದು, ರಸ್ತೆ, ರೈಲು ಹಾಗೂ ವಿಮಾನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮುಂಬೈಯಲ್ಲಿ 2005ರ ಬಳಿಕ ಸುರಿಯುತ್ತಿರುವ ಭಾರೀ ಮಳೆ ಇದಾಗಿದೆ ಎಂದು ಹೇಳಲಾಗುತ್ತಿದೆ.