ಗೂಳಿ ತಿವಿದು ವ್ಯಕ್ತಿಗೆ ಗಾಯ
Update: 2017-08-30 18:15 IST
ಶಿವಮೊಗ್ಗ, ಆ. 30: ಗೂಳಿಯೊಂದು ತಿವಿದು ವ್ಯಕ್ತಿಯೋರ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದೆ.
ಗಾಯಗೊಂಡವರನ್ನು ಸಿ.ಎಸ್.ಎಂ. ಗುಪ್ತ ಎಂದು ತಿಳಿದು ಬಂದಿದೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಎರಡು ಗೂಳಿಗಳು ಪರಸ್ಪರ ಕಾಳಕ್ಕಿಳಿದಿದ್ದು, ಇವುಗಳನ್ನು ಜನರು ಚದುರಿಸಿ ಓಡಿಸಿದ್ದಾರೆ. ಈ ವೇಳೆ ತಮ್ಮ ಅಂಗಡಿಗೆ ನಡೆದುಕೊಂಡು ಬರುತ್ತಿದ್ದ ಗುಪ್ತರವರಿಗೆ ಗೂಳಿಯೊಂದು ತಿವಿದು ಗಾಯಗೊಳಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.