ಪ್ರಾಥಮಿಕ ಸಹಕಾರ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಲಾಭದ ಹಾದಿಯಲ್ಲಿ ಮುನ್ನಡೆದಿದೆ: ಎಚ್.ಬಿ.ಶಿವಣ್ಣ
ಮೂಡಿಗೆರೆ, ಆ,30: ತಾಲೂಕು ಪ್ರಾಥಮಿಕ ಸಹಕಾರ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ತಾಲೂಕಿನ 140 ಹಳ್ಳಿಗಳ ವ್ಯಾಪ್ತಿಯಲ್ಲಿ ಕೆಲಸವನ್ನು ಮಾಡುತಿದ್ದು, 2016-17 ನೇ ಸಾಲಿನಲ್ಲಿ 59.90 ಲಕ್ಷ ಲಾಭದ ಹಾದಿಯಲ್ಲಿ ಮುನ್ನಡೆದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಚ್.ಬಿ.ಶಿವಣ್ಣ ತಿಳಿಸಿದರು.
ಅವರು ಬುಧವಾರ ಪಟ್ಟಣದ ಲ್ಯಾಂಪ್ಸ್ ಸಹಕಾರ ಭವನದಲ್ಲಿ ಹಮ್ಮಿಕೊಂಡಿದ್ದ 81 ನೇ ವಾರ್ಷಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸದ್ಯ 5608 ಎ ತರಗತಿ ಸದಸ್ಯರಿದ್ದು, ಎ ತರಗತಿ ಷೇರು ಬಂಡವಾಳ 112.69 ಲಕ್ಷ, 1613 ಬಿ ತರಗತಿ ಸದಸ್ಯರಿಂದ ಷೇರು ಬಂಡವಾಳ 0.02 ಲಕ್ಷ, ಭೂ ಸುಧಾರಣಾ ಷೇರು 0.50 ಲಕ್ಷ, ರಾಜ್ಯ ಬ್ಯಾಂಕಿನ ಇಂಜಕ್ಷನ್ ಷೇರು 1.11 ಲಕ್ಷ ಒಟ್ಟು ಷೇರು ಬಂಡವಾಳ 114.32 ಲಕ್ಷ ಇದೆ. ಈ ಸಾಲಿನಲ್ಲಿ 87 ಜನ ಎ ತರಗತಿಗೆ ಹೊಸದಾಗಿ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದರು.
ಬ್ಯಾಂಕ್ ಸದಸ್ಯರಿಂದ ಠೇವಣೆಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದು, 2017 ರ ಮಾರ್ಚ್ 31 ರ ಅಂತ್ಯಕ್ಕೆ81.32 ಲಕ್ಷಗಳಾಗಿರುತ್ತದೆ. 2016-17 ನೇ ಸಾಲಿನಲ್ಲಿ ಸುಸ್ತಿ ಹಾಗೂ ಚಾಲ್ತಿ ಕಂತು ಸೇರಿ 650.00 ಲಕ್ಷ ವಸೂಲಾಗಬೇಕಿದೆ. ಈ ಪೈಕಿ 401.87 ಲಕ್ಷ ಬಾಕಿ ಉಳಿದಿದ್ದು, ಶೇ.61.83 ಗಳಾಗಿದೆ. ಮುಂದಿನ ವರ್ಷ ಕಡೇ ಪಕ್ಷ ಶೇ.90 ರಷ್ಟು ವಸೂಲಾತಿಯಾಗಲು ಸದಸ್ಯರ ಸಹಕಾರ ಅತ್ಯಗತ್ಯ. ಬ್ಯಾಂಕಿನ ಲೆಕ್ಕ ಪತ್ರಗಳು ಗಣಕೀಕೃತಗೊಂಡಿದೆ ಎಂದು ನುಡಿದರು.
2016-17 ನೇ ಸಾಲಿನಲ್ಲಿ ವಿವಿಧ ಯೋಜನೆಗಳಲ್ಲಿ 131 ಜನ ಸದಸ್ಯರಿಗೆ 286.39 ಲಕ್ಷ ಸಾಲ ವಿತರಿಸಿದ್ದು, ಸದಸ್ಯರ ಸಾಲ ಹೊರಬಾಕಿ ಎಲ್ಲಾ ಯೋಜನೆಗಳು ಸೇರಿ 2017ರ ಮಾ.31ರ ಅಂತ್ಯಕ್ಕೆ 1328.42 ಲಕ್ಷಗಳಾಗಿದೆ. ಬ್ಯಾಂಕಿಗೆ ಬರುವ ಲಾಭಕ್ಕೆ ತೊಂದರೆಯಾಗುವುದರಿಂದ ಸದಸ್ಯರಿಗೆ ಕೊಡುವ ಡಿವಿಡೆಂಡ್ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ 3 ವರ್ಷಗಳಿಂದ ಹೆಚ್ಚಿನ ಸುಸ್ತಿ ಉಳಿಸಿಕೊಂಡ ಸದಸ್ಯರು ಇದರ ಮೇಲೆ ಆಗುವ ಪರಿಣಾಮವನ್ನು ಅರಿತು ತಕ್ಷಣ ಸುಸ್ತಿ ಕಂತುಗಳನ್ನು ಕಟ್ಟುವಂತೆ ಮನವಿ ಮಾಡಿದರು.
ಬ್ಯಾಂಕಿನ ವ್ಯವಸ್ಥಾಪಕ ಒ.ಎಂ.ಪದ್ಮನಾಭಗೌಡ, ಉಪಾಧ್ಯಕ್ಷ ಕೆ.ಟಿ.ಸತೀಶ್, ನಿರ್ದೇಶಕರುಗಳಾದ ಕೃಷ್ಣೇಗೌಡ ಎಂ.ಜೆ. ಶ್ರೀಮತಿ ನಿರ್ಮಲ, ಎಚ್.ಟಿ.ರವಿಕುಮಾರ್, ಸಿ.ಆರ್.ನೇಮಿರಾಜ್, ಶ್ರೀಮತಿ ಬಿ.ಎಲ್.ಪುಷ್ಪಲತ, ಎಚ್.ಆರ್.ಸುಧೀರ್, ಎಚ್.ಎ.ಗಜೇಂದ್ರ, ಓ.ಜಿ.ರವಿ, ಪ್ರಕಾಶ್, ವೈ.ಎಸ್.ಮರಿಯಯ್ಯ, ಸರ್ಕಾರದ ನಾಮನಿರ್ದೇಶಕ ಎಂ.ಕೆ.ಚಂದ್ರೇಶ್, ಕರ್ನಾಟಕ ರಾಜ್ಯ ಬ್ಯಾಂಕಿನ ಪ್ರತಿನಿಧಿ ಎಚ್.ಎನ್.ಪುಟ್ಟರಾಜು ಉಪಸ್ಥಿತರಿದ್ದರು.