ಚಿಕ್ಕಮಗಳೂರು: ವ್ಯಕ್ತಿ ನಾಪತ್ತೆ
Update: 2017-08-30 23:43 IST
ಚಿಕ್ಕಮಗಳೂರು, ಆ.30: ನಗರದ ಉಪ್ಪಳ್ಳಿ ಬಡಾವಣೆಯ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪಳಿ ವಾಸಿ ಸುನಿಲ್(38) ನಾಪತ್ತೆಯಾಗಿದ್ದಾರೆ. ಈತ ಇತ್ತೀಚೆಗೆ ಕೆಲಸಕ್ಕೆ ತೆರಳಿದ್ದು, ವಾಪಸ್ ಬಾರದೆ ಕಾಣೆಯಾಗಿದ್ದಾರೆ. 5.5 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಕೋಲು ಮುಖ, ಕಪ್ಪು ಬಣ್ಣ, ಕೆಂಪು ಪ್ಯಾಂಟ್, ಬಿಳಿ ಷರಟು, ಕಪ್ಪು ಜರ್ಕಿನ್ ಧರಿಸಿರುತ್ತಾರೆ. ಕನ್ನಡ, ತಮಿಳು ಭಾಷೆ ಮಾತನಾಡುವ ಇವರ ಮಾಹಿತಿ ಇದ್ದಲ್ಲಿ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.