ಮಾಂಗಲ್ಯ ಸರ ಕಸಿದು ಪರಾರಿ
Update: 2017-08-31 17:31 IST
ಬೀರೂರು, ಆ.31: ವಾಯು ವಿಹಾರ ಮಾಡುತ್ತಿದ್ದ ಮಹಿಳೆಯನ್ನು ಇಬ್ಬರು ಆಗಂತುಕರು ಕೊರಳಲ್ಲಿದ್ದ ಮಾಂಗಲ್ಯ ಸರ ಕಸಿದು ಪರಾರಿಯಾಗಿರುವ ಘಟನೆ ಬೀರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೀರೂರು ಪಟ್ಟಣದ ಶ್ರೀಮತಿ ಲಲಿತಮ್ಮ ಎಂಬವರು ವಾಯು ವಿಹಾರ ಮಾಡುತ್ತಿದ್ದಾಗ ಕ್ಲಬ್ ರಸ್ತೆ ದಾಟಿ ಮುಂದೆ ಸಾಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಆಗಂತುಕರು ಕೊರಳಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರದಲ್ಲಿ ಅರ್ಧ ತುಂಡನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಇದರಲ್ಲಿ 7 ಗ್ರಾಂ ತೂಕದ ತಾಳಿ ಮತ್ತು ಗುಂಡುಗಳಿದ್ದವು.
ಕಳುವಾದ ಚಿನ್ನದ ಮಾಂಗಲ್ಯ ಸರ ಸುಮಾರು 27 ಗ್ರಾಂ ತೂಕದ್ದಾಗಿದ್ದು, 35 ಸಾವಿರ ರೂ.ಗಳ ಬೆಲೆ ಬಾಳುತ್ತಿದೆ ಎಂದು ಅಂದಾಜಿಸಲಾಗಿದೆ.
ಈ ಕುರಿತು ಬೀರೂರು ಪೊಲೀಸ್ ಠಾನೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.