×
Ad

ಪರಭಾರೆ ಮಾಡಿರುವ ಸರಕಾರಿ ಜಮೀನನ್ನು ವಶಪಡಿಸಿಕೊಳ್ಳುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರಿಂದ ಧರಣಿ

Update: 2017-08-31 17:52 IST

ಬಾಗೇಪಲ್ಲಿ, ಆ.31: ಭೂಗಳ್ಳರು ಈಗಾಗಲೇ ಪರಭಾರೆ ಮಾಡಿರುವ ಸರಕಾರಿ ಜಮೀನನ್ನು ವಶಪಡಿಸಿಕೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ(ಚಲಪತಿ ಬಣ) ಆಶ್ರಯದಲ್ಲಿ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದರು.

ಡಾ.ಎಚ್.ಎನ್.ವೃತ್ತದಿಂದ ಮೆರವಣಿಗೆ ಬಂದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಧರಣಿ ಕುಳಿತರು.

ಈ ವೇಳೆ ಮಾತನಾಡಿದ ತಾಲೂಕು ಕರವೇ ಅಧ್ಯಕ್ಷ ಕ್ರಿಕೆಟ್ ಮೂರ್ತಿ, ತಾಲೂಕಿನ ಕೊಂಡರೆಡ್ಡಿಪಲ್ಲಿ ಗ್ರಾಮದ ಸರ್ವೇ ನಂ. 12ರಲ್ಲಿ ಸುಮಾರು 14 ಎಕರೆ ಸರಕಾರಿ ಗೋಮಾಳ ಜಮೀನು ಇದ್ದು ಈ ಪೈಕಿ ವಾಲ್ಮೀಕಿ ಸಮುದಾಯ ಭವನಕ್ಕೆ 30 ಗುಂಟೆ, ಡಾ.ದೇವರಾಜ ಅರಸು ಭವನ ನಿರ್ಮಾಣಕ್ಕೆ 30 ಗುಂಟೆ ಹಾಗೂ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣ ಮಾಡಲು 1ಎಕರೆ ಮೀಸಲು ಇಡಲಾಗಿದೆ ಎಂದರು.

ಕಸಬಾ ಹೋಬಳಿಗೆ ಸೇರಿರುವ ಸರ್ವೇ ನಂ-137ರಲ್ಲಿ ಒಂದು ಎಕರೆ 5ಗುಂಟೆ ಜಮೀನನ್ನು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ಹಾಗೂ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಮೀಸಲಿಡಲಾಗಿದೆ. ಈ ಜಮೀನಿನ ಬೆಲೆ 2ಕೋಟಿ ಆಂದಾಜು ಮಾಡಲಾಗಿದ್ದು ಈ ಅಸ್ತಿಯನ್ನು ಭೂಗಳ್ಳರು ಅಕ್ರಮಿಸಿಕೊಂಡು ಪರಭಾರೆ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು.

ಆದ್ದರಿಂದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಭೂಗಳ್ಳರು ಪರಭಾರೆ ಮಾಡಿರುವ ಜಮೀನನ್ನು ವಶಪಡಿಸಿಕೊಂಡು ಮುಂದೆ ಯಾವುದೇ ಹುನ್ನಾರಗಳು ನಡೆಸದಂತೆ ಕ್ರಮ ಜರುಗಿಸಬೇಕಾಗಿದೆ. ಜತೆಗೆ ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಉಪ ತಹಶೀಲ್ದಾರ್ ನಾಗರಾಜ್ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಅಂಬರೀಶ್,ತಾಲೂಕು ಪ್ರಧಾನ ಕಾರ್ಯದರ್ಶಿ ಆರ್.ಎಂ.ಭಾಷ,ಉಪಾಧ್ಯಕ್ಷ ಸುರೇಶ್ ಹಾಗೂ ಮುಖಂಡರಾದ ಜಭೀ,ಅಸ್ಮಸುಲ್ತಾನ,ಗಂಗಮ್ಮ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News