ಹನೂರು: ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ
ಹನೂರು, ಸೆ.1: ನರೇಗಾ ಯೋಜನೆಯಡಿ 2017-18ನೇ ಸಾಲಿನ ಅವಧಿಯಲ್ಲಿ 186 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 55 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ತಾಲೂಕು ಸಂಯೋಜಕ ಮನೋಹರ್ ಮಾಹಿತಿ ನೀಡಿದರು.
ಕ್ಷೇತ್ರ ವ್ಯಾಪಿಯ ಮಾರ್ಟಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ 2017-18ನೇ ಸಾಲಿನ ಮಾದಲನೇ ಸುತ್ತಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನಾ ಸಭೆಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ ಉದ್ಯೋಗ ಪಡೆದ ಪ್ರತಿಯೊಬ್ಬರಿಗೂ ಪ್ರತಿದಿನ ರೂ.236 ದಿನ ಗೂಲಿ ನೀಡಲಾಗುತ್ತಿದೆ. ಒಂದು ವೇಳೆ ಗ್ರಾಮಸ್ಥರು ಉದ್ಯೋಗ ಕೇಳಿಯೂ ಪಂಚಾಯತ್ ವತಿಯಿಂದ ಉದ್ಯೋಗ ನೀಡಲಾಗದಿದ್ದ ಸಂದರ್ಭಗಳಲ್ಲಿ ನಿರುದ್ಯೋಗ ಭತ್ಯೆ ನೀಡಲಾಗುವುದು. ಆದುದರಿಂದ ಪ್ರತಿಯೊಬ್ಬರೂ ಉದ್ಯೋಗ ಚೀಟಿಯ ಪ್ರಾಮುಖ್ಯತೆಯನ್ನು ತಿಳಿದುಕೊಂಡು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಉದ್ಯೋಗ ಚೀಟಿ ಮಧ್ಯ ವರ್ತಿಗಳಿಗೆ ನೀಡದೆ ಇದರ ಸದುಪಯೋಗವನ್ನುತಾವೇ ಪಡೆದುಕೂಂಡಾಗ ಮಾತ್ರ ಈ ಯೋಜನೆ ಯಶಸ್ಸಾಗಲೂ ಸಾಧ್ಯ. ಹಾಗೆಯೇ ರೈತರು ಒಕ್ಕಣೆ ಕೆಲಸವನ್ನು ರಸ್ತೆಗಳಲ್ಲಿ ಮಾಡುವುದ್ದರಿಂದ ಆ ಪದಾರ್ಥಗಳು ಹಾಳಾಗಿ ವಿಷಕಾರಿಯಾಗುತ್ತದೆ.ಆದ್ದುದರಿಂದ ರೈತರು ಸಾರ್ವಜನಿಕವಾಗಿ ನಿರ್ಮಿಸಿಕೊಂಡಿರುವ ಒಕ್ಕಣೆ ಕಣಗಳಲ್ಲಿ ರಾಗಿ ಜೋಳ ಕೊಂಬು ಇನ್ನಿತರ ಪದಾರ್ಥಗಳನ್ನು ಒಕ್ಕಣೆಗಳನ್ನು ಮಾಡುವ ಅವಕಾಶವಿದೆ ಇದ್ದನ್ನು ಪ್ರತಿಯೊಬ್ಬರು ಪ್ರಯೋಜವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಾರ್ಟಳ್ಳಿ ಕ್ಲಸ್ಟರ್ ಸಿಆರ್‍ಪಿ ಶ್ರೀನಿವಾಸ್ ಮೂರ್ತಿ ಮಾತನಾಡಿ, ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೂಡಿಸುವಿಕೆಗೆ ಹೆಚ್ಚು ಗಮನ ಹರಿಸಬೇಕು ಹಾಗೂ ಶಾಲೆಯಿಂದ ಹೂರ ಉಳಿದ ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸಲೂ ಶಿಕ್ಷಣ ಇಲಾಖೆಯ ಸಿಬ್ಬಂದಿಯ ಜೊತೆ ಸಾರ್ವಜನಿಕರೂ ಕೈ ಜೋಡಿಸಬೇಕು. ಅಲ್ಲದೆ, ಪ್ರತಿಯೊಂದು ಮಗುವಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಆದುದ್ದರಿಂದ ಆಧಾರ್ ಕಾರ್ಡನ್ನು ನೋಂದಾಯಿಸಿಕೋಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹ್ಮದ್ ಮಾತನಾಡಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬೋದ್ದಮ್ಮ ,ಉಪಾಧ್ಯಕ್ಷ ಜಪಮಾಲೈ, ಸದಸ್ಯರಾದ ರಾಮಲಿಂಗ, ಬಾಲು, ಪುಷ್ಪರಾಣಿ, ಚಿನ್ನಪ್ಪ, ಖಾಸಿಮ್ , ಶಿವಣ್ಣ , ಮುಖಂಡ ಮಾಧು, ಪಿಡಿಒ ನಜುಂಡ ಸ್ವಾಮಿ ಮತ್ತಿತರರಿದ್ದರು.