ಹನೂರು: ಬಿಜೆಪಿ ಕಾರ್ಯಕಾರಿಣಿ ಸಭೆ
ಹನೂರು, ಸೆ.1: ಪಿಎಫ್ ಐ, ಕೆಎಫ್ ಡಿ ಹಾಗೂ ಎಸ್ ಡಿಪಿಐ ಸಂಘಟನೆಗಳು ನಡೆಸುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ಖಂಡಿಸಿ ಹಾಗೂ ಇಂತಹ ಸಂಘಟನೆಗಳಿಗೆ ಬೆಂಬಲ ನೀಡಿ ಪೋಷಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ “ಮಂಗಳೂರು ಚಲೋ” ಬೃಹತ್ ಬೈಕ್‍ರ್ಯಾಲಿ ಮತ್ತು ಪ್ರತಿಭಟನೆಯನ್ನುರಾಜ್ಯ ಬಿಜೆಪಿ ಯುವಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ಈ ಪ್ರತಿಭಟನೆಗೆ ಹನೂರು ಮಂಡಲದಿಂದ ಕನಿಷ್ಠ 50 ಬೈಕ್‍ಗಳನ್ನು ತಲಾ ಇಬ್ಬರಂತೆ 100 ಜನಕಾರ್ಯಕರ್ತರು ಅಥವಾ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹನೂರು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಕೆ.ಪಿ.ವೃಷಬೇಂದ್ರಸ್ವಾಮಿ ಹೇಳಿದರು.
ಬಿಜೆಪಿ ಯುವಮೋರ್ಚಾ ಹನೂರು ಘಟಕ ಹಮ್ಮಿಕೊಂಡಿದ್ದ ನಾಲ್ಕನೇ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕಾರ್ಯಕರ್ತರು ಪಕ್ಷದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ, ವ್ಯಕ್ತಿಗೆ ಆದ್ಯತೆಯನ್ನು ನೀಡದೇ ಪಕ್ಷವನ್ನುದೃಷ್ಟಿಯಲ್ಲಿರಿಸಿಕೊಂಡು ಪಕ್ಷದ ವರಿಷ್ಠ ಬಿ.ಎಸ್.ಯಡಿಯೂರಪ್ಪನವರು ಯಾರನ್ನು ಗುರುತಿಸಿ ಬಿ’ ಫಾರ್ಮ್ ನೀಡುತ್ತಾರೋ ಅವರಿಗೆ ಬೆಂಬಲವಾಗಿ ನಿಂತು ನಮ್ಮ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನು ಆರಿಸಿ ಕಳುಹಿಸಿಕೊಡುವುದು ಎಂದು ಹೇಳಿದರು.
ಕಾರ್ಯಕಾರಿಣಿಯಲ್ಲಿ ಜಿಲ್ಲಾ ಪ್ರಭಾರಿಗಳಾಗಿ ಯುವಮೋರ್ಚಾಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ, ಮಂಡಲ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ರಾಚಯ್ಯ, ಮಹದೇವ ಪ್ರಸಾದ್, ಡಿ.ಕೆ.ರಾಜು, ಯುವಮೋರ್ಚಾ ಪ್ರಧಾನಕಾರ್ಯದರ್ಶಿ ಮಾತೃಭೂಮಿ ಮೂರ್ತಿ, ಗ್ರಾಮಪಂಚಾಯತ್ ಸದಸ್ಯರಾದ ಶಿವಮೂರ್ತಿ, ನೆಲ್ಲೂರು ರಾಜೇಂದ್ರ, ಪಿಜಿ ಪಾಳ್ಯ ಮಹದೇವಸ್ವಾಮಿ, ಕುಮಾರ್, ಮಹೇಶ್, ವರಪ್ರಸಾದ್ ಮತ್ತಿತರರು ಹಾಜರಿದ್ದರು.