×
Ad

ಮಾಲೂರು: ಪತಿಯಿಂದ ಪತ್ನಿ ಕೊಲೆ

Update: 2017-09-01 22:07 IST

ಮಾಲೂರು, ಸೆ.1: ಗಂಡನೋರ್ವ ತನ್ನ ಹೆಂಡತಿ ಮೇಲೆ ಬರ್ಬರವಾಗಿ ಕೊಚ್ಚಿ ಹಲ್ಲೆ ನಡೆಸಿದ ಪರಿಣಾಮ ಪತ್ನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ತಾಲೂಕಿನ ದೊಡ್ಡಕಡತೂರು ಗ್ರಾಮದ ವಿಜಯಕುಮಾರ್(35) ಕೌಟಂಬಿಕ ಕಲಹದ ಹಿನ್ನೆಲೆ ಶುಕ್ರವಾರ ನಡೆದ ಮಾತಿನ ಚಕಮಕಿಯಲ್ಲಿ ತನ್ನ ಪತ್ನಿ ಮಂಜುಳ(30) ಎಂಬಾಕೆಯನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಹಲ್ಲೆ ಮಾಡಿದ್ದು, ಸ್ಥಳದಲ್ಲಿದ್ದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಾಲೂರು ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿ ವಿಜಯ ಕುಮಾರ್‍ರನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದ್ದು, ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News