​ರಾಷ್ಟ್ರಪತಿ, ಪ್ರಧಾನಿಯಿಂದ ಬಕ್ರೀದ್ ಶುಭಾಶಯ

Update: 2017-09-02 07:03 GMT

ಹೊಸದಿಲ್ಲಿ,ಸೆ.2 : ದೇಶದ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಮುಸ್ಲಿಮರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈದ್-ಉಲ್-ಅಝ್ ಹಾದ ಶುಭಾಶಯ ಸಲ್ಲಿಸಿದ್ದಾರೆ.

``ಈದ್-ಉಲ್-ಅಝ್ ಹಾ ಶುಭ ದಿನದಲ್ಲಿ ನನ್ನ ಎಲ್ಲಾ ಸಹ ನಾಗರಿಕರಿಗೆ, ಮುಖ್ಯವಾಗಿ ಮುಸ್ಲಿಂ ಸಹೋದರ ಸಹೋದರಿಯರಿಗೆ  ಶುಭಾಶಯಗಳು,'' ಎಂದು ರಾಷ್ಟ್ರಪತಿ ಕೋವಿಂದ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೂಡ ಹಬ್ಬದ ಶುಭಾಶಯ ಕೋರಿದ್ದು  ದೇಶದಲ್ಲಿ ಸಾಮರಸ್ಯ, ಸಹೋದರತೆಯಿರಲಿ ಎಂದು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News