×
Ad

ದೇವಾಲಯ ಅಪವಿತ್ರ : ನಾಪೋಕ್ಲು ಕಾಂಗ್ರೆಸ್ ಖಂಡನೆ

Update: 2017-09-02 17:00 IST

ಮಡಿಕೇರಿ,ಸೆ.2 : ಕಕ್ಕಬೆಯ ಶ್ರೀ ಭಗವತಿ ದೇವಾಲಯವನ್ನು ಅಪವಿತ್ರಗೊಳಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿಯು, ಪೊಲೀಸರು ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ರಮಾನಾಥ್, ಚುನಾವಣೆ ಸಮೀಪಿಸುವ ಸಂದರ್ಭ ಕೋಮುವಾದಿ, ವಿಚ್ಛಿದ್ರಕಾರಿ ಶಕ್ತಿಗಳು ಈ ರೀತಿಯ ಪ್ರಕರಣಗಳನ್ನು ಹುಟ್ಟುಹಾಕುವ ಮೂಲಕ ಅಶಾಂತಿ ಮೂಡಿಸಲು ಹುನ್ನಾರ ನಡೆಸುತ್ತಿದ್ದು, ಜನರು ಸಹನೆಯಿಂದ ಇದನ್ನು ಖಂಡಿಸಬೇಕೆಂದರು. ಯಾರೂ ಪ್ರಚೋದನೆಗೆ ಒಳಗಾಗಬಾರದೆಂದು ಮನವಿ ಮಾಡಿದ ಅವರು, ಪೊಲೀಸರು ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.

 ಶಾಂತಿ ಸೌಹಾರ್ದತೆಗಾಗಿ ಕಾಂಗ್ರೆಸ್ ಪಕ್ಷ ಬದ್ಧತೆಯಿಂದ ಕಾರ್ಯ ನಿರ್ವಹಿಸಲಿದೆ. ಜಿಲ್ಲೆಯಲ್ಲಿ ಅಶಾಂತಿ ಮೂಡಿದರೆ ಪ್ರವಾಸೋದ್ಯಮ ಕ್ಷೇತ್ರ ಸೇರಿದಂತೆ ಜನ ಜೀವನ ಅಸ್ತವ್ಯಸ್ತವಾಗಲಿದ್ದು, ಯಾರೂ ಪ್ರಚೋದನೆಗಳಿಗೆ ಕಿವಿಗೊಡಬಾರದು ಎಂದರು. “ಘಟನೆಯನ್ನು ಖಂಡಿಸೋಣ, ಶಾಂತಿ ಸೌಹಾರ್ದತೆಯನ್ನು ಸಂರಕ್ಷಿಸೋಣ” ಎನ್ನುವ ಧ್ಯೇಯ ವಾಕ್ಯದೊಂದಿಗೆ ಜಿಲ್ಲೆಯ ಶಾಂತಿಗೆ ಸರ್ವರು ಸಹನೆಯಿಂದ ವರ್ತಿಸಬೇಕೆಂದು ತಿಳಿಸಿದರು.

 ಸುದ್ದಿಗೋಷ್ಠಿಯಲ್ಲಿ ಕಕ್ಕಬ್ಬೆ ಸಹಕಾರಿ ಸಂಘದ ಅಧ್ಯಕ್ಷರಾದ ಬಿ.ಲವಚಿಣ್ಣಪ್ಪ, ಕಕ್ಕಬ್ಬೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಲವಚಂಗಪ್ಪ, ಕುಂಜಿಲ ಕಕ್ಕಬ್ಬೆ ಗ್ರಾ.ಪಂ ಉಪಾಧ್ಯಕ್ಷ ವೈಕೋಳ್ ಉಸ್ಮಾನ್ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಖಜಾಂಚಿ ಮೊಹಮ್ಮದ್ ಹಾಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News