×
Ad

ಡಿಸಿ ಕಛೇರಿ ಸುತ್ತಮುತ್ತ ಪ್ರತಿಭಟನೆ ನಡೆಸದಂತೆ ವಿಧಿಸಿರುವ ನಿಷೇಧಾಜ್ಞೆ ತೆರವಿಗೆ ಒತ್ತಾಯ

Update: 2017-09-02 17:06 IST

ಚಿಕ್ಕಮಗಳೂರು, ಸೆ.2: ಸರಕಾರ, ಅಧಿಕಾರಿಗಳು ಅಥವಾ ಯಾವುದೇ ರೀತಿಯ ಸಮಸ್ಯೆ, ಕಿರುಕುಳ ತಲೆದೋರಿದರೆ ನ್ಯಾಯಕ್ಕಾಗಿ ಸಂವಿದಾನದತ್ತ ರೀತಿಯಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗಿದ್ದು, ಜಿಲ್ಲಾಧಿಕಾರಿಯವರು ತಮ್ಮ ಕಛೇರಿ ಸುತ್ತಮುತ್ತ ಪ್ರತಿಭಟನೆ ನಡೆಯದಂತೆ ನಿಷೇಧಾಜ್ಞೆ ವಿಧಿಸರುವುದನ್ನು ತೆರವುಗೊಳಿಸಬೇಕು ಎಂದು ರೈತ ಸಂಘದ ಮುಖಂಡ ಗುರುಶಾಂತಪ್ಪ ಒತ್ತಾಯಿಸಿದರು.

 ಅವರು ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ವಿವಿಧಪಕ್ಷಗಳ ಮತ್ತು ಸಂಘಟನೆಗಳ ಮುಖಂಡರು ನಡೆಸಿದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪ್ರಜಾತತಂತ್ರ ವ್ಯವಸ್ಥೆಯಲ್ಲಿ ತಮ್ಮ ಹಕ್ಕು ಪಡೆಯಲು ಹಾಗೂ ಆಡಳಿತ ವ್ಯವಸ್ಥೆ ಹಳಿ ತಪ್ಪಿದಾಗ ಎಚ್ಚರಿಸಲು ಪ್ರತಿಭಟನೆ ನಡೆಸುವುದು ಜನರ ಮೂಲಭೂತ ಹಕ್ಕಾಗಿದೆ. ಇದನ್ನು ನಿರ್ಭಂಧಿಸುವ ಮನಸ್ಥಿತಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಧಮನಗೊಳಿಸುವ ಜನವಿರೋಧಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಹಲವು ಬಾರಿ ವಿವಿಧ ಪಕ್ಷ ಮತ್ತು ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ಆದರೆ ಈ ತನಕ ಯಾವುದೆ ತೆರನಾದ ಪ್ರಯೋಜನವೂ ಆಗಿಲ್ಲ. ಇದನ್ನು ನೋಡಿದರೆ ರಾಜ್ಯ ಸರಕಾರವೇ ಅಧಿಕಾರಿಗಳ ಮೂಲಕ ಕಛೇರಿಗಳ ಎದುರು ಪ್ರತಿಭಂಧಕಾಜ್ಞೆ ವಿಧಿಸಿರುವಂತಿದೆ. 144 ಸೆಕ್ಷನ್ ಮೂಲಕ ಜನರ ಹಕ್ಕುಗಳನ್ನು ಮೊಟಕುಗೊಳಿಸಿ ಚಳುವಳಿಗಳನ್ನು ಹತ್ತಿಕ್ಕಿ, ಜನರ ಧ್ವನಿ ಅಡಗಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

 ಸಿಪಿಐನ ರೇಣುಕಾರಾಧ್ಯ ಮಾತನಾಡಿ, ಇದೀಗ ಜಿಲ್ಲಾ ಕೇಂದ್ರದ ಆಜಾದ್‍ಪಾರ್ಕ್‍ನಲ್ಲಿ ಚಳುವಳಿ ನಡೆಸಲು ಅವಕಾಶ ಮಾಡಿಕೊಂಡುತ್ತಿರುವುದು ಸರ್ವೋಚ್ಚ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾರಣ ಲ್ಲಿ ಆಸ್ಪತ್ರೆ, ಶಾಲಾ, ಕಾಲೇಜುಗಳಿದ್ದು, ಪ್ರತಿಭಟನೆ-ಚಳುವಳಿಗಳೀಂದ ರೋಗಿಗಳಿಗೆ, ವಿದ್ಯಾರ್ಥಿ ಸಮೂಹಕ್ಕೆ ಅನಗತ್ಯ ಕಿರುಕುಳ ನೀಡಿದಂತಾಗುತ್ತಿದೆ. ಆದ್ದರಿಂದ ತಕ್ಷಣ ಇಲ್ಲಿ ವಿಧಿಸಿರುವ ನಿರ್ಭಂಧವನ್ನು ಒಂದು ವಾರದೊಳಗೆ ತೆರವುಗಳಿಸದಿದ್ದರೆ ಜಿಲ್ಲೆಗೆ ಆಗಮಿಸುವ ಉಸ್ತುವಾರಿ ಸಚಿವರ ಎದುರು ಕಪ್ಪು ಬಾವುಟ ಪ್ರದರ್ಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 ಈ ಸಮಯದಲ್ಲಿ ಬಿಎಸ್‍ಪಿಯ ಕೆ.ಟಿ.ರಾಧಾಕೃಷ್ಣ, ಸಿಪಿಐ ಮುಖಂಡ ಬಿ.ಅಮ್ಜದ್, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಎಎಪಿಯ ಡಾ.ಸುಂದರ್ ಗೌಡ, ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದಿಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News