ಕುಮಟಾ : ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ
Update: 2017-09-02 17:52 IST
ಕುಮಟಾ,ಸೆ.2 ; ತಾಲೂಕಿನ ತೊರ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದುಳಿದ ಬಡ ಹಾಲಕ್ಕಿ ಗೌಡರೇ ಹೆಚ್ಚಾಗಿರುವ ಮೂಲೆಕೇರಿಯಲ್ಲಿ ಕೇಂದ್ರದ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕಿಟ್ ವಿತರಿಸಲಾಯಿತು.
ಕುಮಟಾದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ ಸಹಕಾರದದಲ್ಲಿ ಫಲಾನುಭವಿಗಳನ್ನುಗುರುತಿಸಲಾಗಿದ್ದು 15 ಸಿಲಿಂಡರ್ ಗಳನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ, ಗುರುಗೌಡ, ರಾಮು ಕೆಂಚನ, ಟ್ರಸ್ಟ್ ಕಾರ್ಯದರ್ಶಿ ಅರುಣಕವರಿ, ಶ್ರೀನಿವಾಸ ನಾಯಕ, ಮಿರ್ಜಾನ ಶಕ್ತಿ ಕೇಂದ್ರದ ಅಧ್ಯಕ್ಷರಾದ ವೆಂಕಟ್ರಮಣ ಕವರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.