×
Ad

ಮಠಗಳ ಅಭಿವೃದ್ಧಿಗೆ ಸರಕಾರದಿಂದ ಸಹಾಯ: ಆರ್.ವಿ.ದೇಶಪಾಂಡೆ

Update: 2017-09-02 18:13 IST

ಬೆಂಗಳೂರು, ಸೆ.2: ಮಠಮಾನ್ಯಗಳು ಸಂಸ್ಕೃತಿಯ ಭಾಗವಾಗಿದ್ದು, ಇವುಗಳ ಅಭಿವೃದ್ಧಿಗೆ ಸರಕಾರದಿಂದ ಎಲ್ಲ ರೀತಿಯ ಸಹಾಯ ಮಾಡಲಾಗುವುದು ಎಂದು ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

 ನಗರದ ಕಣ್ವಮಠಲ್ಲಿ ಆತೋಜಿಸಿದ್ದ ಚಾತುರ್ಮಾಸ ಹಾಗೂ ಕಣ್ವಧರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಠಮಾನ್ಯಗಳು ಸಾವಿರಾರು ವರ್ಷಗಳಿಂದಲೂ ದೇಶದ ಸಂಸ್ಕೃತಿ ಪರಂಪರೆಯನ್ನು ಕಾಪಾಡಿಕೊಂಡು ಬಂದಿವೆ. ಇಂತಹ ಮಠಗಳನ್ನು ಸಂರಕ್ಷಿಸುವುದು ಸರಕಾರದ ಕೆಲಸವೆಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಮಾತನಾಡಿ, ಮಠಗಳು ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಇಂತಹ ಮಠಗಳನ್ನು ಪೋಷಿಸುವುದು ಎಲ್ಲರ ಕರ್ತವ್ಯ. ಹಾಗೂ ಸರಕಾರದ ವತಿಯಿಂದಲೂ ಅಗತ್ಯ ನೆರವನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ಕಣ್ವ ಮಠದ ವಿದ್ಯಾವಾರಿಧಿ ಶ್ರೀಗಳು ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News