ಸಾಮಾಜಿಕ ಜಾಲತಾಣಗಳಲ್ಲಿ ಸಂಯಮದಿಂದ ವರ್ತಿಸಿ:ಎಸ್. ಸುರೇಶ್‌ಕುಮಾರ್
ತುಮಕೂರು,ಸೆ.02:ಸಾಮಾಜಿಕ ಜಾಲತಾಣವು ಕೋಟ್ಯಂತರ ಜನರನ್ನು ತಲುಪುವ ಸಂವಹನ ಮಾಧ್ಯಮವಾಗಿ ಇಂದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಕೊಂಡಿದೆ.ಇಂತಹ ಸಂದರ್ಭದಲ್ಲಿ ಪೆಸ್‌ಬುಕ್, ಟ್ವಿಟರ್‌ಗಳನ್ನು ಉಪಯೋಗಿಸುವ ಯುವಜನತೆಯು ಸಂಯಮದಿಂದ ವರ್ತಿಸಬೇಕು.ಯಾವೂಬ್ಬರನ್ನು ಟೀಕಿಸುವ ಬರದಲ್ಲಿ ಅವರ ಚಾರಿತ್ರ್ಯವನ್ನು ವಧೆ ಮಾಡುವಂತಹ ನೀಚ ಕೆಲಸಕ್ಕೆ ಕಾರ್ಯಕರ್ತರು ಇಳಿಯಬಾರದು ಎಂದು ಮಾಜಿ ಸಚಿವ ಎಸ್. ಸುರೇಶ್‌ಕುಮಾರ್ ತಿಳುವಳಿಕೆ ಹೇಳಿದ್ದಾರೆ.
ಬಿಜೆಪಿ ಯುವ ಮೋರ್ಚಾ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ ವತಿಯಿಂದ ಏರ್ಪಡಿಸಿದ್ದ ಸಾಮಾಜಿಕ ಜಾಲತಾಣ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ ಬಿ.ಬಿ.ಎಂ.ಪಿ.ಯಲ್ಲಿ ಅಧಿಕಾರ ಹಿಡಿಯಲು ಶಾಸಕರುಗಳ ತಪ್ಪು ವಿಳಾಸನ್ನು ನೀಡಿ ಮತದಾನ ಮಾಡಿಸಿದ್ದಾರೆ.ಭತ್ಯೆ ಪಡೆಯಲು ಶಾಸಕರು ತಮ್ಮ ನಿಜವಾದ ವಿಳಾಸ ನೀಡಿದ ಸಂದರ್ಭದಲ್ಲಿ ಅವರ ಬಣ್ಣ ಬಯಲಾಗಿದೆ.ಮುಖ್ಯಮಂತ್ರಿಯ ಅಣತಿಯ ಮೇರೆಗೆ ತಪ್ಪು ವಿಳಾಸ ನೀಡಿದ ಶಾಸಕನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ.ನೈತಿಕತೆ ಇಲ್ಲದ ಮುಖ್ಯಮಂತ್ರಿ ಹಾಗೂ ಮಂತ್ರಿಗಳಿಂದ ನಾವು ಅಭಿವೃದ್ದಿಯನ್ನು ನೀರಿಕ್ಷಿಸುವುದು ಕನಸಿನ ಮಾತು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಯುವಜನತೆಯು ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಪರವಾಗಿ ಧನತ್ಮಕವಾಗಿ ಪ್ರಚಾರ ನಡೆಸುವಂತೆ ಕರೆ ನೀಡಿದರು.
ಬಿಜೆಪಿಯ ಜಿಲ್ಲಾಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ,ಕೇವಲ ವೈಯಕ್ತಿಕ ಪ್ರಚಾರಕಾಗಿ ಸಾಮಾಜಿಕ ಜಾಲತಾಣವನ್ನು ಬಳಸದೇ ಸಮಾಜ ಮುಖಿಯಾದ ಕಾರ್ಯಗಳಿಗೆ ಬಳಸಿ.ಕೇಂದ್ರ ಸರಕಾರದ ಯೋಜನೆಗಳನ್ನು ಫಲನುಭವಿಗಳಿಗೆ ಪ್ರಮಾಣಿಕವಾಗಿ ತಲುಪಿಸುವಂತಹ ಕಾರ್ಯದಲ್ಲಿ ಯುವ ಮೋರ್ಚಾ ಸಹಕರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಹುಲಿನಾಯ್ಕರ್, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ರಂಗನಾಯ್ಕ,ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು, ಜಿಲ್ಲಾ ಐ.ಟಿ.ಸೆಲ್ ಸಂಚಾಲಕ ಎಂ.ಎಸ್.ಗುರುಪ್ರಸಾದ್,ಯುವಮೋರ್ಚಾ ಜಿಲ್ಲಾ ಪ್ರಭಾರಿ ಪ್ರೇಮ್‌ಪ್ರಸಾದ್‌ಶೆಟ್ಟಿ, ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯ ಸಂಚಾಲಕ ಬಾಲಾಜಿ, ನಗರ ಪ್ರಧಾನಕಾರ್ಯದರ್ಶಿ ಹೆಚ್.ಎಂ.ರವೀಶ್. ನಗರಧ್ಯಕ್ಷ ಬಾವಿಕಟ್ಟೆ ಗಣೇಶ್, ವೇದಿಕೆಯಲ್ಲಿದ್ದರು.