×
Ad

ಚಿಕ್ಕಮಗಳೂರು : ರ್ಯಾಲಿ ಫಾರ್ ರಿವರ್ ಕಾರ್ಯಕ್ರಮ

Update: 2017-09-02 21:17 IST

ಚಿಕ್ಕಮಗಳೂರು, ಸೆ.2:ಪ್ರಪಂಚದಾದ್ಯಂತ ಜೀವಿಸಲು ಯೋಗ್ಯವಾದ 10 ಅತ್ಯುತ್ತಮ ಪ್ರದೇಶಗಳ ಪೈಕಿ ಚಿಕ್ಕಮಗಳೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಅದನ್ನು ಹಾಗೆಯೇ ಸಂರಕ್ಷಿಸಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ರೋಟರಿ ಕಾಫಿ ಲ್ಯಾಂಡ್ ಮಾಜಿ ಅಧ್ಯಕ್ಷ ಸಚ್ಚಿದಾನಂದ ತಿಳಿಸಿದರು.

ಅವರು ನಗರದ ಲಯನ್ಸ್ ಭವನದಲ್ಲಿ ಸೈಹ್ಯಾದ್ರಿ ಪ್ಯಾರಾಮೆಡಿಕಲ್ ಕಾಲೇಜು, ಕಾಫಿ ಲ್ಯಾಂಡ್ ಹಾಗೂ ಚಿಕ್ಕಮಗಳೂರು ಅಡ್ವೆಂಚರ್ ಸ್ಪೋಟ್ರ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾಲೇಜಿನ ಹೊಸ ವಿದ್ಯಾರ್ಥಿಗಳ ಪೋಷಕರ ಸಭೆ ಹಾಗೂ ರ್ಯಾಲಿ ಫಾರ್ ರಿವರ್ ಕಾರ್ಯಕ್ರಮದಲ್ಲಿ ಮಾತನಾಡಿದರು.

  ಚಿಕ್ಕಮಗಳೂರು ಜಿಲ್ಲೆ ಪ್ರಚಂಚದ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ಪ್ರದೇಶ. ಇದರ ಬಗ್ಗೆ ನಮಗೆ ನಿಜವಾದ ಅರಿವಿಲ್ಲ. ಪ್ರಪಂಚದಾದ್ಯಂತ ಉಳಿಯಲು ಅತ್ಯಂತ ಯೋಗ್ಯವಾದ ಸ್ಥಳಗಳು ಯಾವುದು ಎಂದು ಏಳೆಂಟು ಎನ್‍ಜಿಓಗಳು ಸರ್ವೇ ನಡೆಸಿವೆ. ಅದರಲ್ಲಿ ಮೊದಲನೆ ಸ್ಥಾನ ಸ್ವಿಡ್ಜರ್‍ಲ್ಯಾಂಡ್ ಎಂದು ಬಂತು. ಎರಡನೇ ಸ್ಥಾನ ಚಿಕ್ಕಮಗಳೂರು. ಇದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು. 

ಇದಕ್ಕೆ ಹಲವು ಕಾರಣಗಳನ್ನು ಸಮೀಕ್ಷೆಯಲ್ಲಿ ನೀಡಿದೆ. ಮುಂದಿನ ಹಲವು ವರ್ಷಗಳಲ್ಲಿ ಯಾವುದೇ ರೀತಿಯ ಪ್ರಕೃತಿ ವಿಕೋಪಗಳು ಇಲ್ಲಿ ಸಂಭವಿಸುವುದಿಲ್ಲ. ಅತಿ ಹೆಚ್ಚು ಆಮ್ಲಜನಕವನ್ನು ಉತ್ಪತ್ತಿಮಾಡುವ ವಲಯವೂ ಚಿಕ್ಕಮಗಳೂರು ಆಗಿದೆ. ಇದರೊಂದಿಗೆ ಇಲ್ಲಿನ  ಜನ, ಸಂಸ್ಕøತಿ ಹಾಗೂ ವರ್ಷದ 365 ದಿನಗಳಲ್ಲಿ ಸುಮಾರು 300 ದಿನ ಏರ್‍ಕಂಡೀಷನರ್ ಅಗತ್ಯವಿಲ್ಲದೆ ಇರುವುದನ್ನು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಲ್ಲೇಗೌಡ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ದೊಡ್ಡಮಲ್ಲಪ್ಪ ಮಾತನಾಡಿ, ಕೇವಲ ಶಿಕ್ಷಣ ಇದ್ದರೆ ಸಾಲದು, ಸಮಾಜದ ಏಳಿಗೆಗೂ ಅದರಿಂದ ಕೊಡುಗೆ ಸಿಗಬೇಕೆಂದರೆ ನೈತಿಕತೆ ಅಗತ್ಯ ಎಂದು ಹೇಳಿದರು.

ಠಾಣಾಧಿಕಾರಿ ರೇಣುಕಾ ಮಾತನಾಡಿ, ವಿದ್ಯೆಯಿಂದ ವಿನಯ ಬರಬೇಕು. ಆಗ ಯಾವುದೇ ಕರ್ತವ್ಯದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಜೀನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ವಿದ್ಯೆಗೆ ಯಾವುದೇ ಬೆಲೆ ಬರುವುದಿಲ್ಲ. ನಾವು ಎಲ್ಲಿ ಸಂಸ್ಕಾರವಂತರಾಗುತ್ತೇವೆ.   ವಿನಯವಂತರಾಗುತ್ತೇವೆ ಅಲ್ಲಿ ವಿದ್ಯೆಗೆ ಬೆಲೆ ಬರುತ್ತದೆ ಎಂದು ನುಡಿದರು.

ಸೈಹ್ಯಾದ್ರಿ ಪ್ಯಾರಾಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ನಳಿನಾ ಡಿಸಾ ಮಾತನಾಡಿ ಪೋಷಕರು ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸಿದ ಕೂಡಲೇ ಜವಾಬ್ದಾರಿ ಮುಗಿಯಿತು ಎಂದುಕೊಳ್ಳಬಾರದು. ಅವರ ನಡವಳಿಕಗೆಗಳನ್ನು ಗಮನಿಸುತ್ತಿರಬೇಕು ಎಂದರು.

ವೇದಿಕೆಯಲ್ಲಿ ಕಾಲೇಜಿನ ಅಧ್ಯಕ್ಷ ಸತೀಶ್, ಕಾಫಿ ಲ್ಯಾಂಡ್ ಅಧ್ಯಕ್ಷ ರವೀಂದ್ರ ನಾಯಕ್, ವಿವೇಕ್, ಕಾಲೇಜಿನ ಉಪ ಪ್ರಾಂಶುಪಾಲೆ ರಶ್ಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News